• 15 December 2017 23:32
Jai Kannada
Jai Kannada
Blog single photo
December 05, 2017

ಜಡ್ಜ್ ಎದುರೇ ವಿಷ ಸೇವಿಸಿ ಯುದ್ಧಾಪರಾಧಿ ಆತ್ಮಹತ್ಯೆ

ಮಾಜಿ ಸೇನಾಧಿಕಾರಿ ಸ್ಲೊಬೊಬನ್‌ ಪ್ರಲ್ಜಕ್‌ ನೆದರ್‌ಲ್ಯಾಂಡ್ ಹೇಗ್ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಜಡ್ಜ್ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಂಭವಿಸಿದೆ.

ಯುದ್ಧಾಪರಾಧಗಳ ಸಂಬಂಧ ಹೇಗ್ ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ಸ್ಲೊಬೊಬನ್‌ ಪ್ರಲ್ಜಕ್‌‌ಗೆ 20 ವರ್ಷಗಳ ಶಿಕ್ಷೆಯನ್ನು ಪ್ರಕಟಿಸಿತ್ತು.

ನ್ಯಾಯಮೂರ್ತಿ ಶಿಕ್ಷೆಯನ್ನು ಘೋಷಿಸುತ್ತಿದ್ದಂತೆ ಸಯನೈಡ್ ವಿಷದ ಬಾಟಲ್ ಜೇಬಿನಿಂದ ತೆಗೆದ ಆರೋಪಿ ಬಾಟಲ್ ಎತ್ತಿಹಿಡಿದು ನ್ಯಾಯಮೂರ್ತಿಗಳೇ ನಾನು ಈ ತೀರ್ಪನ್ನು ತಿರಸ್ಕರಿಸುತ್ತೇನೆ. ನಾನು ಅಪರಾಧಿಯಲ್ಲ ಎಂದು ಹೇಳಿ ವಿಷ ಕುಡಿದಿದ್ದಾನೆ. ಅವನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

Recent Comments

Leave Comments

footer
Top