• 15 December 2017 23:33
Jai Kannada
Jai Kannada
Blog single photo
December 05, 2017

ಹೆತ್ತವಳೇ ಹೆಣ್ಣು ಮಗುವನ್ನು ಕೊಂದು ಹಾಕಿದಳು!

 ಗಾಜಿಯಾಬಾದ್: ಗಾಜಿಯಾಬಾದ್ ಪಟ್ಗ ನಗರದಲ್ಲಿ ಆರತಿ ಎಂಬ ಮಹಿಳೆ ತನಗೆ ಹುಟ್ಟಿದ ಮಗು ಹೆಣ್ಣಾಗಿದ್ದರಿಂದ ಬೇಸತ್ತು  ತಾನೇ ಹೊತ್ತು ಬೆಳೆಸಿದ ಮಗುವನ್ನು ಕೈಯಾರೆ ಕೊಂದು ಹಾಕಿದ ಘೋರ ಘಟನೆ ಸಂಭವಿಸಿದೆ.

ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದ ಆರತಿ ಮಗು ಹೆಣ್ಣೆಂದು ತಿಳಿದು ತೀರಾ ನಿರಾಶಳಾಗಿದ್ದಳು. ಕೊನೆಗೆ ಹೆಣ್ಣು ಮಗುವನ್ನು ಕೈಯಾರೆ ಕೊಲ್ಲುವ ಯೋಜನೆ ರೂಪಿಸಿದಳು.  ಮಗುವನ್ನು ದಿಂಬಿನಿಂದ ಮುಚ್ಚಿ ವಾಷಿಂಗ್ ಮೆಷಿನ್‌ಗೆ ತುರುಕಿದಳು. ನಂತರ ಸ್ವಿಚ್ ಆನ್ ಮಾಡಿದಾಗ ಮಗು ವಾಷಿಂಗ್ ಮೆಷಿನ್‌ನಲ್ಲೇ ಮಗು ಪ್ರಾಣ ಬಿಟ್ಟಿದೆ.

ನಂತರ ಪೊಲೀಸರಿಗೆ ತನ್ನ ಮಗುವನ್ನು ಯಾರೋ ಅಪಹರಿಸಿದ್ದಾರೆಂದು ದೂರು ನೀಡಿದಳು. ಪೊಲೀಸರು ತನಿಖೆ ಆರಂಭಿಸಿ ಆರತಿಯ ಮೇಲೆ ಅನುಮಾನಗೊಂಡು ಪ್ರಶ್ನಿಸಿದಾಗ ಆಕೆ ಬಾಯ್ಬಿಟ್ಟಿದ್ದಾಳೆ. ಗಂಡು ಮಗು ಬೇಕೆಂದು ನಾವೇನು ಒತ್ತಾಯ ಮಾಡಿಲ್ಲ. ಆಕೆಯೇ ಸ್ವಯಂ ಪ್ರೇರಣೆಯಿಂದ ಮಗುವನ್ನು ಕೊಂದಿದ್ದಾಳೆಂದು ಆರತಿಯ ಕುಟುಂಬಸ್ಥರು ಹೇಳಿದ್ದಾರೆ.

Recent Comments

Leave Comments

footer
Top