ಬೀಜಿಂಗ್: ಚೀನಾದ ಟಿಯಾನ್ಜಿನ್ ಮೃಗಾಲಯದಲ್ಲಿ 18 ವರ್ಷ ವಯಸ್ಸಿನ ಕಪ್ಪು ಕೂದಲಿನ ಕ್ಯಾಪುಚಿನ್ ಕೋಚಿ ಅಂತರ್ಜಾಲದಲ್ಲಿ ಸಂಚಲನ ಉಂಟುಮಾಡಿದೆ.
ಈ ಮಂಗಕ್ಕೆ ಮಾನವ ರೂಪದ ಮುಖ ಮತ್ತು ಮಾನವ ಲಕ್ಷಣಗಳಿರುವುದು ಇದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದನ್ನು ನೋಡಿ ಅನೇಕ ಮಂದಿ ಅಚ್ಚರಿಗೊಂಡಿದ್ದಾರೆ.
ಮಂಗದ ಕಣ್ಣುಗಳು ಮತ್ತು ಬಾಯಿ ಮಾನವರ ಕಣ್ಣು, ಬಾಯಿಗೆ ಹೋಲಿಕೆಯಾಗುತ್ತದೆ. ಕ್ಯಾಮರಾ ಕಡೆ ಕೋತಿ ಗಾಬರಿಯಿಂದ ನೋಟವನ್ನು ಹರಿಸಿದ್ದನ್ನು ತೋರಿಸಿದೆ.
ಸಾಮಾಜಿಕ ಜಾಲ ತಾಣ ಬಳಕೆದಾರರು ತುಂಬಾ ಅಚ್ಚರಿಯಿಂದ ಮೃಗಾಲಯದ ಸಿಬ್ಬಂದಿ ಕೋತಿಯ ವೇಷ ಧರಿಸಿ ಒಳಗಿರಬಹುದೇ ಎಂದು ಜೋಕ್ ಮಾಡಿದ್ದಾರೆ. ಮಾನವನ ಮುಖಲಕ್ಷಣಗಳನ್ನು ಹೋಲುವ ಪ್ರಾಣಿ ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಯಲ್ಲ. ಗೋರಿಲ್ಲಾ ಮಾನವನ ರೀತಿಯಲ್ಲೇ ಎರಡು ಕಾಲುಗಳಲ್ಲಿ ನಡೆಯುವುದನ್ನು ತೋರಿಸಿದ ವಿಡಿಯೊ ವೈರಲ್ ಆಗಿತ್ತು.
Recent Comments