• 15 December 2017 23:32
Jai Kannada
Jai Kannada
Blog single photo
December 04, 2017

ಕಾಂಗ್ರೆಸ್ ಅಧ್ಯಕ್ಷ ಗದ್ದುಗೆಗೆ ರಾಹುಲ್ ಗಾಂಧಿ  ನಾಮಪತ್ರ: ಮುಖಂಡರಿಗೆ ಖುಷಿಯೋ ಖುಷಿ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮತ್ತು ಕಿರಿಯ ಮುಖಂಡರಲ್ಲಿ ಖುಷಿಯೋ ಖುಷಿ. ಭಾನುವಾರ ಕಾಂಗ್ರೆಸ್‌ನ  ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಗೆ ನಾಮಿನೇಷನ್ ಪತ್ರ ಸಲ್ಲಿಸಿದ ಬಳಿಕ ಅವರೆಲ್ಲಾ ವಿಜಯೋತ್ಸವದ ಗುಂಗಿನಲ್ಲಿದ್ದರು. ಅನೇಕ ಚುನಾವಣೆಗಳಲ್ಲಿ ನೆಲಕಚ್ಚಿದ ಬಳಿಕ ಕಳೆದ ಗತ ವೈಭವ ಮತ್ತೆ ಮರಳಿಬರುತ್ತೆದೆಂಬ ಹೆಬ್ಬಯಕೆ ಅವರ ಮನದಲ್ಲಿ  ಚಿಗುರಿದೆ.

ಏತನ್ಮಧ್ಯೆ ಪ್ರಜಾತಾಂತ್ರಿಕ ಪರಂಪರೆಗಳ ಅಣಕ ಮತ್ತು ಪ್ರಹಸನದ ಚುನಾವಣೆ ಪ್ರಕ್ರಿಯೆ ಎಂದು ಬಿಜೆಪಿಯ ಏಟಿಗೆ ಎದಿರೇಟು ನೀಡಿದ ಕಾಂಗ್ರೆಸ್ ನಮಗೆ ಪಾಠ ಮಾಡಬೇಡಿ ಎಂದು ಹೇಳಿ ಹಿರಿಯ ಪಕ್ಷದ ಸುದೀರ್ಘ ಪ್ರಜಾತಾಂತ್ರಿಕ ಇತಿಹಾಸದ ದಾಖಲೆಯನ್ನು ಉದಾಹರಿಸಿದೆ.

 ರಾಹುಲ್ ಕಾಂಗ್ರೆಸ್ ಪಕ್ಷದ ಡಾರ್ಲಿಂಗ್ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಉದ್ಗರಿಸಿದರು. ಸೋನಿಯಾ ಗಾಂಧಿ ದೇಶಕ್ಕೆ 19 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಮಹಾನ್ ಪರಂಪರೆಯನ್ನು ಮುಂದುವರಿಸುತ್ತಾರೆಂದು ಹೇಳಿದರು.

  ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್, ಕಾಂಗ್ರೆಸ್ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ಪ್ರಶ್ನಿಸಿದ ಬಿಜೆಪಿ ವಿರುದ್ಧ ಕಿಡಿ ಕಾರಿದರು. ಕೇಸರಿ ಪಕ್ಷವೇ ಪ್ರಜಾತಾಂತ್ರಿಕ ಸಂಪ್ರದಾಯಗಳನ್ನು ಪಾಲಿಸುತ್ತಿಲ್ಲ ಎಂದು ಟೀಕಿಸಿದರು.

Recent Comments

Leave Comments

footer
Top