Jai Kannada
Jai Kannada
Blog single photo
December 03, 2017

ರಹಾನೆ ಬದಲಿಗೆ ಯುವ ಬ್ಯಾಟ್ಸ್‌ಮನ್ ಪ್ರಥ್ವಿ ಶಾ ಆಡಲಿದ್ದಾರೆಯೇ?

ಮುಂಬೈ: ಶ್ರೀಲಂಕಾ ಸರಣಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದ ರಹಾನೆ ಹೊರಬೀಳುವ ಸಾಧ್ಯತೆಯಿದೆಯೇ? ಅಜಿಂಕ್ಯಾ ರಹಾನೆ ಪ್ಲೇಸ್‌ಗೆ ಫ್ರಥ್ವಿ ಶಾ ಆಡಲಿದ್ದಾರೆಯೇ ಎಂಬ ಪ್ರಶ್ನೆ ಬಲವಾಗಿ ಕಾಡಿದೆ. ಸ್ಟಾರ್ ಬ್ಯಾಟ್ಸ್‌ಮನ್ ರಹಾನೆ ಈ ಸರಣಿಯಲ್ಲಿ ಫಾರಂ ಕಳೆದುಕೊಂಡಿದ್ದರಿಂದ ಅವರು ದಕ್ಷಿಣ ಆಫ್ರಿಕಾ ಸರಣಿಗೆ ಆಡುವ ಬಗ್ಗೆ ಅನುಮಾನದ ಗೆರೆಗಳು ಮೂಡಿವೆ. ಅಜಿಂಕ್ಯಾ ಪ್ಲೇಸ್‌ಗೆ ಶಾರನ್ನು ಆಯ್ಕೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.  ಲಂಕಾ ಸರಣಿಯಲ್ಲಿ ಅಟ್ಟಕ್ ಫ್ಲಾಪ್ ಆಗಿರುವ ರಹಾನೆ ಬ್ಯಾಟಿಂಗ್‌ನಲ್ಲಿ ತಮ್ಮ ಎಂದಿನ ಮೊನಚು ಕಳೆದುಕೊಂಡಿದ್ದಾರೆ. ಅಜಿಂಕ್ಯಾ ಕಲೆಹಾಕಿರುವುದು ಒಟ್ಟು ಏಳು ರನ್ ಆದ್ದರಿಂದ ಈ ಬಾರಿ ಅಜಿಂಕ್ಯಾ ಪ್ರವಾಸಕ್ಕೆ ತೆರಳುವುದು  ಅನುಮಾನವಾಗಿದೆ.  ಪ್ಸಸ್ತುತ ರಣಜಿ ಸರಣಿಯಲ್ಲಿ ಯುವ ಬ್ಯಾಟ್ಸ್ ಮನ್ ಪ್ರಥ್ವಿ ಶಾ ಉತ್ತಮ ರನ್ ಕಲೆಹಾಕಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

Recent Comments

Leave Comments

footer
Top