Jai Kannada
Jai Kannada
Blog single photo
December 03, 2017

ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೆಚ್ಚು ಆತ್ಮಹತ್ಯೆ

 ಮುಂದಿನ 20 ವರ್ಷಗಳಲ್ಲಿ ಆತ್ಮಹತ್ಯೆ ಸಾವಿನ ಅಗ್ರ 10 ಕಾರಣಗಳ ಪೈಕಿ ಒಂದಾಗಲಿದೆ. ವಿಶ್ವಾದ್ಯಂತ ಪ್ರತಿ ವರ್ಷ 2 ದಶಲಕ್ಷ ಸಾವುಗಳು ಆತ್ಮಹತ್ಯೆಯಿಂದ ಸಂಭವಿಸುತ್ತದೆಂದು ನಿರೀಕ್ಷಿಸಲಾಗಿದ್ದು, ಸಾವಿನ ಕಾರಣಗಳಲ್ಲಿ ಜಗತ್ತಿನಲ್ಲೇ 14ನೇ ಶ್ರೇಯಾಂಕ ಗಳಿಸಿದೆ. ವ್ಯಕ್ತಿಯೊಬ್ಬ ಆತ್ಮಹತ್ಯೆಯ ಅಪಾಯದ ಮೇಲೆ ಪರಿಣಾಮ ಬೀರಲು ಅನೇಕ ಅಂಶಗಳಿವೆ. ಉದಾಹರಣೆಗೆ ವಯಸ್ಸಾದ, ವಿಚ್ಛೇದಿತ, ಕಡಿಮೆ ಆದಾಯದ, ಒಂಟಿಯಾದ ಮತ್ತು ಮಾದಕ ವಸ್ತುಗಳ ಚಟಕ್ಕೆ ದಾಸರಾದ ವ್ಯಕ್ತಿಗಳು ಆತ್ಮಹತ್ಯೆಯ ಹೆಚ್ಚಿನ ಅಪಾಯದಲ್ಲಿದ್ದಾರೆ. ಮಾನಸಿಕ ಕಾಯಿಲೆಗಳು, ಭಾವನೆಗಳ ತಾಕಲಾಟ ಮತ್ತು ಸಾಮಾಜಿಕ ಬೆಂಬಲದ ಕೊರತೆಯನ್ನು ಅಪಾಯದ ಅಂಶಗಳು ಎಂದು ಗುರುತಿಸಲಾಗಿದೆ. ಆದರೆ ಅನೇಕ ಅಧ್ಯಯನಗಳು ಅಮೆರಿಕದ ಆತ್ಮಹತ್ಯೆ ನಮೂನೆಗಳಲ್ಲಿ ಬೌಗೋಳಿಕ ವ್ಯತ್ಯಾಸಗಳನ್ನು ಪ್ರದರ್ಶಿಸಿವೆ. ಪಾಶ್ಚಿಮಾತ್ಯ ರಾಜ್ಯಗಳಲ್ಲಿ ಅಧಿಕ ಆತ್ಮಹತ್ಯೆ ಪ್ರಮಾಣಗಳೊಂದಿಗೆ, ಸಂಶೋಧನೆಗಳಿಂದ ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಅಮೆರಿಕನ್ನರು ಆತ್ಮಹತ್ಯೆಯ ಹೆಚ್ಚಿನ ಅಪಾಯಕ್ಕೆ ಒಳಗಾಗಿದ್ದಾರೆ. ಹೆಚ್ಚಿದ ಎತ್ತರಪ್ರದೇಶವು, ಕೆಲವು ವೈದ್ಯಕೀಯ ಕಾಯಿಲೆಗಳೊಂದಿಗೆ ರಕ್ಷಣಾತ್ಮಕ ಸಂಬಂಧ ಹೊಂದಿದೆಯೆಂದು ತಿಳಿದುಬಂದಿದೆ. ಉದಾಹರಣೆಗೆ ಅಧಿಕ ಎತ್ತರಗಳಲ್ಲಿ ವಾಸಿಸುವ ಜನರು ಹೃದಯ ಕಾಯಿಲೆ ಅಥವಾ ಸ್ಟ್ರೋಕ್‌ನಿಂದ ಸಾಯುವ ಸಂಭವ ಕಡಿಮೆ. ಆದರೆ ಅತಿಯಾದ ಎತ್ತರ ಕೆಲವು ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಉಟಾದಲ್ಲಿ ಬೌಗೋಳಿಕ ಎತ್ತರ 6000 ಅಡಿಯಾಗಿದ್ದು, ಅಲ್ಲಿನ ಆತ್ಮಹತ್ಯೆ ಪ್ರಮಾಣ ಸರಾಸರಿಗಿಂತ ಶೇ. 70ರಷ್ಟು ಹೆಚ್ಚಾಗಿದೆ. ಇದೇ ರೀತಿಯ ಇನ್ನೊಂದು ಅಧ್ಯಯನದಲ್ಲಿ  ಅತೀ ಎತ್ತರದ ಪ್ರದೇಶಗಳ ರಾಜ್ಯಗಳಲ್ಲಿ ಅಧಿಕ ಆತ್ಮಹತ್ಯೆ ಪ್ರಮಾಣಗಳಿತ್ತೆಂದು ತೋರಿಸಿವೆ.ಈ ಅಧ್ಯಯನಗಳಿಂದ ಎತ್ತರವು ಖಿನ್ನತೆ ಲಕ್ಷಣಗಳು ಮತ್ತು ಆತ್ಮಹತ್ಯೆಗೆ ಗಮನಾರ್ಹ ಅಪಾಯದ ಅಂಶವಾಗಿದೆ ಎಂದು ಸಾಬೀತುಮಾಡಿದೆ.

Recent Comments

Leave Comments

footer
Top