• 15 December 2017 23:32
Jai Kannada
Jai Kannada
Blog single photo
December 02, 2017

ಮಂಗಳೂರಿನ ಕರಾವಳಿಗೆ ಅಪ್ಪಳಿಸಿದ ಓಖಿ ಚಂಡಮಾರುತ

ತಿರುವನಂತರಪುರ: ಕನ್ಯಾಕುಮಾರಿ ಸೇರಿದಂತೆ ಕೇರಳದ ಕರಾವಳಿಯಲ್ಲಿ ಓಖಿ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಭಾರೀ ಮಳೆ ಸುರಿಯುತ್ತಿದೆ. ಮೃತರ ಸಂಖ್ಯೆ 12ಕ್ಕೆ ಏರಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಓಕಿ ಚಂಡಮಾರುತ ಕೇರಳ ಮತ್ತು ದಕ್ಷಿಣ ತಮಿಳುನಾಡಿನ ಕರಾವಳಿ ತೀರಗಳಲ್ಲಿ ಅಬ್ಬರ ಮುಂದುವರಿಸಿದ್ದು, 12 ಜನರನ್ನು ಬಲಿತೆಗೆದುಕೊಂಡಿದೆ.  ಕೆಟ್ಟ ಹವೆ ಸ್ಥಿತಿಯಿಂದಾಗಿ ಸಮುದ್ರದಲ್ಲೇ ಸಿಕ್ಕಿಬಿದ್ದಿದ್ದ ಕೇರಳದ ಸುಮಾರು 200ಕ್ಕೂ ಹೆಚ್ಚು ಮೀನುಗಾರರನ್ನು ಸುರಕ್ಷಿತವಾಗಿ ನಿನ್ನೆ ರಾತ್ರಿ ದಡಕ್ಕೆ ತರಲಾಗಿದೆ. ಭಾರತದ ಹವಾಮಾನ ಇಲಾಖೆ ಈಗಾಗಲೇ ಕೇರಳ ಕರಾವಳಿಯ 10 ಕಿಮೀವರೆಗೂ 3-4.9 ಮೀ ಎತ್ತರದ ಬೃಹತ್ ಅಲೆಗಳು ಸಂಜೆ 6.30ರಿಂದ 11.30ರವರೆಗೆ ಅಪ್ಪಳಿಸಲಿವೆ ಎಂದು ಮುನ್ಸೂಚನೆ ನೀಡಿದ್ದಾರೆ. ಓಕಿ ಚಂಡಮಾರುತ ಮಂಗಳೂರು ತೀರಕ್ಕೂ ಕೂಡ ಅಪ್ಪಳಿಸಿದ್ದು, ನಾಲ್ಕು ಮೀನುಗಾರಿಕೆ ದೋಣಿಗಳು ಮುಳುಗಡೆಯಾಗಿವೆ. ಇನ್ನೊಂದು ದೋಣಿಯಲ್ಲಿದ್ದ 8 ಮಂದಿ ಸಂಪರ್ಕಕ್ಕೆ ಸಿಗುತ್ತಿಲ್ಲವಾದ್ದರಿಂದ ಅವರ ಬಂಧುಗಳು ಆತಂಕಿತರಾಗಿದ್ದಾರೆ. ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಮಂಡ್ಯ, ಕೋಲಾರದಲ್ಲೂ ಓಕ್ಲಿ ಪರಿಣಾಮ ಮೇರೆ ಮೀರಿದೆ. ಕಟಾವಿಗೆ ಬಂದಿರುವ ಭತ್ತ, ರಾಗಿ ನಾಶವಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಮತ್ತು ಭಾರತೀಯ ನೌಕಾ ಪಡೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಚಂಡಮಾರುತದ ಪ್ರಕೋಪಕ್ಕೆ ಸಿಕ್ಕಿಬಿದ್ದ ಜನರನ್ನು ರಕ್ಷಿಸುವ ಕಾರ್ಯದಲ್ಲಿ ಭರದಿಂದ ತೊಡಗಿದೆ.

Recent Comments

Leave Comments

footer
Top