• 17 February 2019 13:53
Jai Kannada
Jai Kannada
Blog single photo
March 17, 2018

ಕಾರು ಅಪಘಾತಕ್ಕೆ ಮೂವರು ಏಮ್ಸ್ ವೈದ್ಯರ ಬಲಿ

ದೆಹಲಿ: ದೆಹಲಿಯಿಂದ ಆಗ್ರಾಕ್ಕೆ ತೆರಳುತ್ತಿದ್ದ ಕಾರು ಮಧ್ಯರಾತ್ರಿ ಎರಡೂವರೆ ಗಂಟೆಯಲ್ಲಿ ಅಪಘಾತಕ್ಕೀಡಾಗಿ ಮೂವರು ಏಮ್ಸ್ ವೈದ್ಯರು ಸ್ಥಳದಲ್ಲೇ ದುರ್ಮರಣವಪ್ಪಿದ ಭೀಕರ ಘಟನೆ ಮಥುರಾ ಬಳಿ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದೆ. ಕಾರು ಕಂಟೈನರ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಮಥುರಾದ ಸುರಿರ್ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ, ವೇಗವಾಗಿ ತೆರಳುತ್ತಿದ್ದ ವೈದ್ಯರು ಕುಳಿತಿದ್ದ ಇನೋವಾ ಕಾರು 88ನೇ ಮೈಲಿಗಲ್ಲು ಬಳಿ ಕಂಟೇನರ್‌ಗೆ ಡಿಕ್ಕಿ ಹೊಡೆದು ಮೂವರು ವೈದ್ಯರು ಸ್ಥಳದಲ್ಲೇ ಸತ್ತಿದ್ದಾರೆ.

ಇನ್ನೂ ನಾಲ್ವರು ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದು, ನವದೆಹಲಿಯ ಏಮ್ಸ್‌ಗೆ ಚಿಕಿತ್ಸೆಗಾಗಿ ಕಳಿಸಲಾಗಿದೆ. ಮೃತರನ್ನು ಡಾ. ಹೆಂಬಾಳಾ, ಡಾ. ಯಶ್‌ಪ್ರೀತ್ ಮತ್ತು ಡಾ. ಹರ್ಷದ್ ಎಂದು ಗುರುತಿಸಲಾಗಿದೆ.

 ಯಮುನಾ ಎಕ್ಸ್‌ಪ್ರೆಸ್ ಅಪಘಾತಗಳಿಗೆ ಕುಖ್ಯಾತಿ ಗಳಿಸಿದೆ.  2016 ಕಿಮೀ ಉದ್ದದ ಯಮುನಾ ಎಕ್ಸ್‌ಪ್ರೆಸ್ ವೇ ದೇಶದಲ್ಲಿ ಅತ್ಯಂತ ಅಪಾಯಕಾರಿ ರಸ್ತೆ ಎಂಬ ಹೆಸರು ಪಡೆದಿದ. 2017ರ ಮೊದಲ ಆರು ತಿಂಗಳಲ್ಲೇ 80 ಜನರು ರಸ್ತೆ ಅಪಘಾತಗಳಲ್ಲಿ ಅಸುನೀಗಿದ್ದಾರೆ.

Recent Comments

Leave Comments

footer
Top