• 11 December 2018 14:34
Jai Kannada
Jai Kannada
Blog single photo
March 08, 2018

 ತಲ್ವಾರ್ ದಂಪತಿ ದೋಷಮುಕ್ತಿ ವಿರುದ್ಧ ಸಿಬಿಐ ಸುಪ್ರೀಂಕೋರ್ಟ್‌ಗೆ 

ನವದೆಹಲಿ: ಸಿಬಿಐ ಇಂದು ಅರುಷಿ-ಹೇಮರಾಜ್ ಹತ್ಯೆ ಪ್ರಕರಣದಲ್ಲಿ ತಲ್ವಾರ್ ದಂಪತಿಯನ್ನು  ಖುಲಾಸೆ ಮಾಡಿದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ.

ಅಲಹಾಬಾದ್ ಹೈಕೋರ್ಟ್ ಕಳೆದ ಅ. 12ರಂದು ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರನ್ನು ಅವರ ಅಪ್ರಾಪ್ತ ಪುತ್ರಿ ಅರುಶಿ ಮತ್ತು ಮನೆಸೇವಕ ಹೇಮರಾಜ್ ಹತ್ಯೆಗೆ ಸಂಬಂಧಿಸಿದಂತೆ ದೋಷಮುಕ್ತಿಗೊಳಿಸಿದೆ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ತಪ್ಪಿತಸ್ಥರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿತ್ತು.

 ಈ ತೀರ್ಪನ್ನು ಪ್ರಶ್ನಿಸಿದ ಹೇಮರಾಜ್ ಪತ್ನಿ ಹೈಕೋರ್ಟ್ ತೀರ್ಪಿನಿಂದ 2008ರಲ್ಲಿ ಯಾರೂ ಹತ್ಯೆ ಮಾಡಿಲ್ಲವೆಂದಾಗುತ್ತದೆ. ಯಾರೇ ತಪ್ಪಿತಸ್ಥರಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದರು. ಯಾರಿಗೂ ಶಿಕ್ಷೆ ನೀಡದಿದ್ದರೆ ಸಮಾಜ ಸುರಕ್ಷಿತವಾಗಿರುವುದಿಲ್ಲ ಎಂದು ಅವರು ಹೇಳಿದ್ದರು.

Recent Comments

Leave Comments

footer
Top