• 17 January 2019 20:53
Jai Kannada
Jai Kannada
Blog single photo
March 08, 2018

ಮಹಿಳಾ ಕ್ರಿಕೆಟಿಗರು, ಪುರುಷ ಕ್ರಿಕೆಟಿಗರ ನಡುವೆ ಸಂಭಾವನೆಯ ಅಂತರವೆಷ್ಟು? 

ನವದೆಹಲಿ: ಜಗತ್ತು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇಂದು ಆಚರಿಸುತ್ತಿದೆ. ಆದರೆ ಮಹಿಳೆಯರು ಪ್ರತಿನಿಧಿಸುವ ಎಲ್ಲಾ ಕ್ರೀಡೆಗಳಲ್ಲಿ  ಪುರುಷರಿಗೆ ಸರಿಸಮವಾದ ಸಂಭಾವನೆ ಸಿಗದೇ ಇಂದಿಗೂ ಮಹಿಳಾ ಆಟಗಾರರು ಸಿಕ್ಕ ಹಣದಲ್ಲೇ ತೃಪ್ತಿಪಡುವಂತಾಗಿದೆ.

ಬಿಸಿಸಿಐ ಬುಧವಾರ ಹಿರಿಯ ಪುರುಷ ಕ್ರಿಕೆಟಿಗರು ಮತ್ತು ಮಹಿಳಾ ಕ್ರಿಕೆಟಿಗರಿಗೆ ಬಿಡುಗಡೆ ಮಾಡಿದ ಹೊಸ ಸಂಭಾವನೆ ವ್ಯವಸ್ಥೆ ಮತ್ತು ಗುತ್ತಿಗೆ ಪಟ್ಟಿಯ ಕಡೆ ನೋಟ ಹರಿಸಿದಾಗ ಪೂರ್ಣ ಕಥೆಯನ್ನು ಬಿಚ್ಚಿಡುತ್ತದೆ. ಪುರುಷ ಕ್ರಿಕೆಟಿಗರ ಗುತ್ತಿಗೆ ಮತ್ತು ಮಹಿಳಾ ಕ್ರಿಕೆಟಿಗರ ಗುತ್ತಿಗೆಯಲ್ಲಿನ ಅಗಾಧ ಅಂತರವನ್ನು ಅದು ತೆರೆದಿಡುತ್ತದೆ.

ವಾರ್ಷಿಕ ಗುತ್ತಿಗೆ 2017ರ ಅಕ್ಟೋಬರ್‌ನಿಂದ 2018ರ ಸೆಪ್ಟೆಂಬರ್ ತನಕವಿದೆ. ಬ್ಯಾಟಿಂಗ್ ತ್ರಿಮೂರ್ತಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜತೆಗೆ ವೇಗಿ ಭುವನೇಶ್ವರ್ , ಬುಮ್ರಾ ಎ+ ವರ್ಗದಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ತಲಾ 7 ಕೋಟಿ ವಾರ್ಷಿಕ ಗುತ್ತಿಗೆಯ ಖಾತರಿ ನೀಡುತ್ತದೆ.
ಧೋನಿ ಮತ್ತು ಅಶ್ವಿನ್  ಜತೆಗೆ ರವೀಂದ್ರ ಜಡೇಜಾ, ಮುರಳಿ ವಿಜಯ್ , ಪೂಜಾರ್, ರಹಾನೆ, ಸಹಾ ಎ ಕೆಟಗರಿಯಲ್ಲಿದ್ದು, ತಲಾ 5 ಕೋಟಿ ಸಂಭಾವನೆ ಸಿಗುತ್ತದೆ.

ಉಳಿದ ಗ್ರೇಡ್ ಸಿಯಲ್ಲಿರುವ ಕ್ರಿಕೆಟಿಗರಿಗೆ ತಲಾ ಒಂದು ಕೋಟಿ ಸಂಭಾವನೆ. ಆದಾಗ್ಯೂ, ಮಹಿಳಾ ಕ್ರಿಕೆಟರುಗಳಿಗೆ ನೀಡುವ ಸಣ್ಣ ಮೊತ್ತದ ಸಂಭಾವನೆ ಆಘಾತಕಾರಿಯಾಗಿದೆ.

ಮಹಿಳೆಯರ ಪೈಕಿ ವಿಶ್ವ ಕಪ್ ಸ್ಟಾರ್‌ಗಳಾದ ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಣ್ಣ ಅವರ ವಾರ್ಷಿಕ ಗುತ್ತಿಗೆ 50 ಲಕ್ಷ ಮೌಲ್ಯದ್ದಾಗಿದೆ. ಇವರೆಲ್ಲರೂ ಅಗ್ರಶ್ರೇಣಿಯಲ್ಲಿರುವ ಆಟಗಾರ್ತಿಯರು.

ಪೂನಮ್ ಯಾದವ್, ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಮುಂತಾದವರಿಗೆ ಸಂಭಾವನೆ 30 ಲಕ್ಷ. ಗ್ರೇಡ್ ಸಿಯಲ್ಲಿರುವ ಆಟಗಾರ್ತಿಯರಿಗೆ ಸಂಭಾವನೆ ಕೇವಲ 10 ಲಕ್ಷಗಳು.  ಮಹಿಳಾ ದಿನಕ್ಕೆ ಒಂದು ದಿನ ಮುಂಚಿತವಾಗಿ ಘೋಷಣೆಯಾದ ಈ ಸಂಭಾವನೆ ಮೊತ್ತ ಭೂಷಣಪ್ರಾಯವೇ, ಮಹಿಳೆಯರನ್ನು ಕಡೆಗಣಿಸಿದ ಹಾಗಾಗಲಿಲ್ಲವೇ. 2017ರ ವಿಶ್ವ ಕಪ್ ಫೈನಲ್ಸ್ ತಲುಪಿ ಮಿಲಿಯಾಂತರ ಭಾರತೀಯರ ಹೃದಯ ಗೆದ್ದ ಈ ಆಟಗಾರ್ತಿಯರು ಬಿಸಿಸಿಐಗೆ ಮಾತ್ರ ಸ್ವೀಕಾರಾರ್ಹವಾಗಿಲ್ಲ.
.

Recent Comments

Leave Comments

footer
Top