Jai Kannada
Jai Kannada
Blog single photo
March 07, 2018

ಶಮಿ ವಿರುದ್ಧ ಪತ್ನಿಯ ಗಂಭೀರ ಆರೋಪ: ಕಾಂಟ್ರಾಕ್ಟ್ ತಡೆಹಿಡಿದ ಬಿಸಿಸಿಐ 

ನವದೆಹಲಿ: ಮೊಹಮ್ಮದ್ ಶಮಿ ಮದುವೆಯಾದ ದಿನದಿಂದಲೂ ನನ್ನನ್ನು ಹೆಂಡತಿಯಂತೆ ಕಾಣದೇ ಚಿತ್ರಹಿಂಸೆ ನೀಡುತ್ತಿದ್ದ ಎಂದು ಶಮಿ ಅವರ ಪತ್ನಿ ಹಸೀನ್ ಜಹಾನ್ ಆರೋಪಿಸಿದ್ದಾರೆ. ಅವನಿಗೆ ಬೇಕಾದ್ದೆಲ್ಲವನ್ನೂ ನಾನು ಮಾಡಿದೆ. ಅವನು ನನಗೆ ಚಿತ್ರಹಿಂಸೆ ನೀಡಿದ್ದಾನೆ. ಅವನು ದೊಡ್ಡ ಮೋಸಗಾರ.

ನನ್ನ ಕೊನೆಯ ಉಸಿರಿರುವ ತನಕ ನಾನು ಅವನಿಗೆ ವಿಚ್ಛೇದನ ನೀಡುವುದಿಲ್ಲ. ನನ್ನ ಬಳಿ ಎಲ್ಲಾ ಸಾಕ್ಷ್ಯಾಧಾರಗಳಿದ್ದು, ಕೋರ್ಟ್‌ಗೆ ಶೀಘ್ರದಲ್ಲೇ ಎಳೆಯುತ್ತೇನೆ ಎಂದು ಹಸೀನಾ ಜಹಾನ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾಳೆ. ಈ ಕುರಿತು ಸುದ್ದಿವಾಹಿನಿಯೊಂದರಲ್ಲೂ  ತನ್ನ ಸಂಕಟವನ್ನು ತೋಡಿಕೊಂಡಿದ್ದಾಳೆ.

ಏತನ್ಮಧ್ಯೆ ಮೊಹಮ್ಮದ್ ಶಮಿ ವಿರುದ್ಧ ಅವನ ಪತ್ನಿ ಆರೋಪ ಮಾಡಿರುವುದರಿಂದ 27 ವರ್ಷದ ವೇಗದ ಬೌಲರ್ ಶಮಿಗೆ ನೀಡಿದ್ದ ಗ್ರೇಡ್ ಬಿ (3 ಕೋಟಿ ರೂ.) ಕಾಂಟ್ರಾಕ್ಟನ್ನು ಬಿಸಿಸಿಐ ತಡೆಹಿಡಿದಿದೆ. 2017-18ರ ಸೀಸನ್‌ಗೆ 26 ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿತ್ತು.

Recent Comments

Leave Comments

footer
Top