• 19 October 2018 12:40
Jai Kannada
Jai Kannada
Blog single photo
March 06, 2018

ಪೊಲೀಸ್` ಅಪಹರಿಸಿದ ತಾಯಿ, ಮಗ ಮಹಡಿಯಿಂದ ಬಿದ್ದು ಸಾವು 

`ಬೆಂಗಳೂರು: 60 ವರ್ಷದ ಮಹಿಳೆ ಮತ್ತು 34 ವರ್ಷದ ಪುತ್ರ 5ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೋಲಾರ ಜಿಲ್ಲೆಯ ವಿಶೇಷ ಬ್ರಾಂಚ್ ಇನ್ಸ್‌ಪೆಕ್ಟರ್ ಚಂದ್ರಪ್ಪ ಅವರನ್ನು ಕಾಡುಗೋಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಚಂದ್ರಪ್ಪ ಸುಂದರಮ್ಮ ಮತ್ತು ಅವರ ಪುತ್ರ ಮೌನೇಶ್‌ನನ್ನು ಯಾದಗಿರಿ ಜಿಲ್ಲೆಯಿಂದ ಕರೆಸಿಕೊಂಡು ಎಂಎಸ್‌ಸಿ ಎಂಪ್ರೆಸ್ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು.

 ಮಂಗಳವಾರ ಅವರ ಫ್ಲಾಟ್ ಮೇಲಿನಿಂದ ಸುಂದರಮ್ಮ ಮತ್ತು 34 ವರ್ಷದ ಮೌನೇಶ್ ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೆಎಸ್‌ಆರ್ಟಿಸಿ ಬಸ್ ಚಾಲಕನಾಗಿದ್ದ ಮೌನೇಶ್ ಚಂದ್ರಪ್ಪ ಸೋದರಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅದು ಮೌನೇಶ್ ಎರಡನೇ ಮದುವೆ ಮತ್ತು ಬೇರೆ ಜಾತಿಯವನಾಗಿದ್ದರಿಂದ ಚಂದ್ರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿ ಸೋದರಿಯನ್ನು ಬಲವಂತವಾಗಿ ಮನೆಗೆ ಕರೆತಂದಿದ್ದರು. ಸೋದರನ ಮನೆಯಲ್ಲಿದ್ದಾಗಲೇ ಮಂಜುಳಮ್ಮ ಕಾಣೆಯಾಗಿದ್ದಳು. ಇದಕ್ಕೆ ಸಂಬಂಧಿಸಿ ಇನ್ಸ್‌ಪೆಕ್ಟರ್ ಮೌನೇಶ್ ಮತ್ತು ಅವನ ತಾಯಿಯನ್ನು ನಗರಕ್ಕೆ ಕರೆತಂದಿದ್ದರು.

ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್‌ಗೆ ಸಂಜೆ 5 ಗಂಟೆಗೆ ಭಾರೀ ಶಬ್ದ ಕೇಳಿಸಿತು. ಕೂಡಲೇ ಸ್ಥಳಕ್ಕೆ ಧಾವಿಸಿದಾಗ ಮಹಿಳೆ ಮತ್ತು ಪುತ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡುಬಂತು. ಈ ಘಟನೆ ನಡೆದಾಗ ಚಂದ್ರಪ್ಪ ಫ್ಲಾಟ್‌ನಲ್ಲಿದ್ದರು. ಇವರಿಬ್ಬರು ಅಡುಗೆಮನೆ ಬಾಲ್ಕನಿಯಿಂದ ಅವರಾಗೇ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಅಥವಾ ಅವರನ್ನು ತಳ್ಳಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆಯಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
 

Recent Comments

Leave Comments

footer
Top