• 17 January 2019 21:11
Jai Kannada
Jai Kannada
Blog single photo
March 05, 2018

ಬಾಡಿಬಿಲ್ಡರ್‌ಗಳಿಗೆ ಎದೆಹಾಲು ಮಾರಿ ಲಕ್ಷಗಟ್ಟಲೆ ಸಂಪಾದಿಸಿದ ತಾಯಿ

ಸೈಪ್ರಸ್: ಮಕ್ಕಳಿಗೆ ತಾಯಿ ಹಾಲು ತುಂಬಾ ಅತ್ಯಗತ್ಯ. ನವಜಾತ ಶಿಶುವಿಗೆ ಸರಿಯಾಗಿ ತಾಯಿಹಾಲು ಸಿಗದಿದ್ದರೆ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಆದರೆ ತನ್ನ ಮಗುವಿಗೆ ಕುಡಿಸಬೇಕಾಗಿದ್ದ ಹೆಚ್ಚುವರಿ ಹಾಲನ್ನು ಇಲ್ಲೊಬ್ಬರು ತಾಯಿ ಬಾಡಿಬಿಲ್ಡರ್‌ಗಳಿಗೆ ನೀಡಿ ಲಕ್ಷಗಟ್ಟಲೆ ಸಂಪಾದನೆ ಮಾಡಿದ್ದಾಳೆ. 

ಸೈಪ್ರಸ್ ದೇಶದಲ್ಲಿ 2 ಮಕ್ಕಳ ತಾಯಿ ರಾಫೆಲಾ ಲ್ಯಾಂಪ್ರೊಗೆ ಕೆಲವು ತಿಂಗಳ ಕೆಳಗೆ ಗಂಡುಮಗುವಾಗಿತ್ತು. ಮಗುವಿಗೆ ಏಳು ತಿಂಗಳಾಗಿದ್ದು, ಅಗತ್ಯಕ್ಕಿಂತ ಹೆಚ್ಚು ಸಿಗುವ ಎದೆ ಹಾಲನ್ನು ಬಾಡಿಬಿಲ್ಡರುಗಳಿಗೆ ಮಾರಿ ಹಣ ಸಂಪಾದಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಬಾಡಿಬಿಲ್ಡರುಗಳು ತಾಯಿ ಎದೆಹಾಲಿನಲ್ಲಿ ಅತೀ ಹೆಚ್ಚು ಪೌಷ್ಠಿಕಾಂಶವಿರುವುದರಿಂದ ಹಣ ಕೊಟ್ಟು ಖರೀದಿಸುತ್ತಾರೆ.

ತಮ್ಮ ಸ್ನಾಯುಗಳನ್ನು ಬೆಳೆಸುವುದಕ್ಕೆ ಎದೆಹಾಲು ಅತ್ಯವಶ್ಯಕ ಎನ್ನುತ್ತಾರೆ ಬಾಡಿಬಿಲ್ಡರುಗಳು. ಈವರೆಗೆ ರಾಫೆಲಾ 500 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ್ದು, 4 ಲಕ್ಷ ರೂ. ಗಳಿಸಿದ್ದಾಳೆ. ಆದರೆ ರಾಫೆಲಾ ಎದೆಯಲ್ಲಿ ಮಗುವಿಗೆ ನೀಡಿದ ಮೇಲೂ ಹೆಚ್ಚುವರಿ ಹಾಲು ಹೇಗೆ ಉತ್ಪಾದನೆಯಾಗುತ್ತಿದೆ ಎನ್ನುವುದು ಪ್ರಶ್ನಾರ್ಥಕವಾಗಿದೆ.

Recent Comments

Leave Comments

footer
Top