Jai Kannada
Jai Kannada
Blog single photo
March 05, 2018

ಟಿಡಿಎಸ್ ಕಡಿತ ಮಾಡಿ ನುಂಗಿ ನೀರು ಕುಡಿದ ಕಂಪನಿಗಳು

ಮುಂಬೈ: ಉದ್ಯೋಗಿಗಳ ವೇತನದ ಮೇಲಿನ ತೆರಿಗೆ ಹಣ ಟಿಡಿಸ್ ಕಡಿತ ಮಾಡಿಕೊಂಡ ಸಂಸ್ಥೆಗಳ ಮಾಲೀಕರು ಆದಾಯ ತೆರಿಗೆ ಇಲಾಖೆಗೆ ಪಾವತಿ ಮಾಡದೇ ವಂಚಿಸಿರುವುದು ಪತ್ತೆಯಾಗಿದೆ. ಈ ರೀತಿ ಸುಮಾರು 447 ಕಂಪನಿಗಳು ನೌಕರರಿಂದ ಟಿಡಿಎಸ್ ಹಣ ವಸೂಲಿ ಮಾಡಿಕೊಂಡು ಇಲಾಖೆಗೆ ಕಟ್ಟದೇ ತಮ್ಮ ಉದ್ಯಮಹಿತಾಸಕ್ತಿಗಳಿಗೆ ಬಳಸಿಕೊಂಡಿರುವುದು ಕಂಡುಬಂದಿದೆ.

ಈ ರೀತಿ ಅಕ್ರಮವಾಗಿ ಬಳಸಿಕೊಂಡ ಹಣದ ಮೌಲ್ಯ ಸುಮಾರು 3200 ಕೋಟಿ ರೂ. ಎಂದು ಹೇಳಲಾಗುತ್ತಿದ್ದು, ಟಿಡಿಎಸ್ ವಿಭಾಗ ಈ ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿರುವುದಾಗಿ ಗೊತ್ತಾಗಿದೆ. 

ಈ ರೀತಿ ಟಿಡಿಎಸ್ ಹಣ ಕಟ್ಟದೇ ವಂಚನೆ ಮಾಡಿರುವ ತಪ್ಪತಸ್ಥರ ಪೈಕಿ ಬಿಲ್ಡರ್ ಒಬ್ಬರು 100 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಕೆಲವು  ಚಿತ್ರ ನಿರ್ಮಾಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳೂ ಈ ವಂಚನೆ ಪ್ರಕರಣದಲ್ಲಿ ಸೇರಿವೆ.

Recent Comments

Leave Comments

footer
Top