Jai Kannada
Jai Kannada
Blog single photo
March 05, 2018

ಸೀನ್ ಅಬಾಟ್ ಬೌನ್ಸ್‌ಗೆ ಮತ್ತೊಬ್ಬ ಆಟಗಾರನಿಗೆ ಗಾಯ

ಮೆಲ್ಬೋರ್ನ್: ಸೀನ್ ಅಬಾಟ್ ಅವರ ಮರಣಸ್ವರೂಪಿ ಬೌನ್ಸ್‌ಗೆ 2014ರ ನವೆಂಬರ್‌ನಲ್ಲಿ ಫಿಲಿಪ್ ಹ್ಯೂಸ್ ಬಲಿಯಾದ ಘಟನೆಯ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಅಬಾಟ್ ಬೌನ್ಸರ್‌ ಎಸೆತವು ಬ್ಯಾಟ್ಸ್‌ಮನ್ ವಿಲ್ ಫುಕೋಸ್ಕಿ ಹೆಲ್ಮೆಟ್‌‌ಗೆ ಬಲವಾಗಿ ಅಪ್ಪಳಿಸಿದ್ದರಿಂದ ಅವನು ಕುಸಿದುಬಿದ್ದಿದ್ದ.

ಸೀನ್ ಅಬಾಟ್ ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ತಂಡವನ್ನು ಪ್ರತಿನಿಧಿಸಿದರೆ, ವಿಲ್  ಫುಕೋಸ್ಕಿ ವಿಕ್ಟೋರಿಯಾ ತಂಡದ ಆಟಗಾರನಾಗಿದ್ದ.

ನೆಲಕ್ಕುರುಳಿ ಗಾಯಗೊಂಡ ವಿಲ್ ಗಾಯಗೊಂಡು ನಿವೃತ್ತಿಯಾದರು. ಸ್ವಲ್ಪ ಸಮಯದ ಬಳಿಕ ವೈದ್ಯರ ಚಿಕಿತ್ಸೆಯಿಂದ ಚೇತರಿಸಿಕೊಂಡ ವಿಲ್ ಮೈದಾನದಿಂದ ಹೊರನಡೆದಿದ್ದರು.
 

Recent Comments

Leave Comments

footer
Top