Jai Kannada
Jai Kannada
Blog single photo
March 02, 2018

ಅನುಷ್ಕಾರ `ಪರಿ` ಚಿತ್ರವನ್ನು ಪಾಕಿಸ್ತಾನ ನಿಷೇಧಿಸಲು ಕಾರಣವೇನು?

ನವದೆಹಲಿ: ಬಾಲಿವುಡ್ ಫಿಲ್ಮ್ ಸ್ಟಾರ್ ಅನುಷ್ಕಾ ಶರ್ಮಾ ಅಭಿನಯದ ಹೊಸ ಚಿತ್ರ ಪಾರಿ ವಾಮಾಚಾರ, ಇಸ್ಲಾಮಿಕ್ ವಿರೋಧಿ ಮೌಲ್ಯಗಳು ಮತ್ತು ಮುಸ್ಲಿಂ ವಿರೋಧಿ ಭಾವನೆಗಳಿಗೆ ಉತ್ತೇಜಿಸುವುದರಿಂದ ಅದನ್ನು ನಿಷೇಧಿಸುವುದಾಗಿ ಪಾಕಿಸ್ತಾನ ತಿಳಿಸಿದೆ.
ಹಿಂದಿ ಹಾರರ್ ಚಿತ್ರ ಪರಿಯು ಕುರಾನ್ ಸಾಲುಗಳನ್ನು ಬಳಸಿರುವ ಆಕ್ಷೇಪಾರ್ಹ ಸನ್ನಿವೇಶಗಳನ್ನು ಕೂಡ ಹೊಂದಿರುವುದರಿಂದ ಪಾಕಿಸ್ತಾನ ಸೆನ್ಸಾರ್ ಮಂಡಳಿ ಅದನ್ನು ನಿಷೇಧಿಸಿದೆ.

ಹಿಂದೂ ಮಂತ್ರಗಳ ಜತೆಗೆ ಕುರಾನ್ ಸಾಲುಗಳ ಮಿಶ್ರಣವಲ್ಲದೇ, ಮುಸ್ಲಿಮರನ್ನು ನಕಾರಾತ್ಮಕ ರೀತಿಯಲ್ಲಿ ಚಿತ್ರಿಸಿದ್ದಾರೆ. ಮುಸ್ಲಿಮರು ಮಾಟ ಮಂಕ್ರ ಮಾಡಲು ಕುರಾನಿಕ್ ಸಾಲುಗಳನ್ನು ಪಠಿಸುವುದನ್ನು ಅದರಲ್ಲಿ ತೋರಿಸಲಾಗಿದೆ ಎಂದು ಪಾಕಿಸ್ತಾನದ ಸೆನ್ಸಾರ್ ಮಂಡಳಿ ಮೂಲಗಳು ಆರೋಪಿಸಿವೆ. 

 ಯಾವುದೇ ಚಿತ್ರ ನಮ್ಮ ಸಂಸ್ಕೃತಿ ಮತ್ತು ಇಸ್ಲಾಮಿಕ್ ಇತಿಹಾಸದ ವಿರುದ್ಧ ಹೋದರೆ ಅದನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗುತ್ತದೆ ಎಂದು ಪಾಕಿಸ್ತಾನ ಚಿತ್ರ ವಿತರಕರ ಸಂಸ್ಥೆಯ ಅಧ್ಯಕ್ಷ ಚೌಧರಿ ಎಜಾಜ್ ಕಾಮ್ರಾ ತಿಳಿಸಿದರು.

ಒಟ್ಟಿನಲ್ಲಿ ಪಾರಿ ಚಿತ್ರವು ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗುತ್ತೆಂದು ನಿಷೇಧಿಸಲಾಗಿದೆ. ಆದರೆ ಹಿಂದೂ ಭಾವನೆಗಳಿಗೆ ಧಕ್ಕೆಯಾದರೂ ಪದ್ಮಾವತ್ ಚಿತ್ರದ ಪ್ರದರ್ಶನಕ್ಕೆ  ಅಡ್ಹಿಯಾಗದೇ ನಿರಾತಂಕ ಪ್ರದರ್ಶನ ಕಂಡಿರುವುದು ಹಿಂದೂಗಳ ಕೋಮುಸಹಿಷ್ಣುತೆಗೆ ಉದಾಹರಣೆಯಾಗಿದೆ.

Recent Comments

Leave Comments

footer
Top