• 16 October 2018 16:16
Jai Kannada
Jai Kannada
Blog single photo
February 25, 2018

ಟಿ ಟ್ವೆಂಟಿ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತಕ್ಕೆ ಸರಣಿ ಜಯ

ನವದೆಹಲಿ: ಭುವನೇಶ್ವರ್ ಕುಮಾರ್ ಅಂತಿಮ ಓವರಿನಲ್ಲಿ ಹೆಚ್ಚು ರನ್ ನೀಡದೇ ಬಾರತವನ್ನು ರಕ್ಷಣೆ ಮಾಡುವ ಮೂಲಕ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಅಂತಿಮ ಟಿ 20 ಪಂದ್ಯದಲ್ಲಿ 7 ರನ್‌ಗಳಿಂದ ಜಯಗಳಿಸಿದೆ. ರೋ

ಮಾಂಚಕಾರಿ ಜಯದ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ಗೆದ್ದಿದೆ. ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರೂ, ಕ್ರಿಶ್ಚಿಯನ್ ಜೋಂಕರ್ ಪ್ರವಾಸಿಗಳಿಗೆ ಕೊನೆಯ ಹಂತದಲ್ಲಿ 24 ಚೆಂಡುಗಳಲ್ಲಿ 49 ರನ್ ಸಿಡಿಸಿ ನಡುಕ ಹುಟ್ಟಿಸಿದರು. ಆದರೆ ಪಂದ್ಯದ ಅಂತಿಮ ಚೆಂಡಿನಲ್ಲಿ ಭುವನೇಶ್ವರ್‌ಗೆ ಔಟಾದರು.

ಜೋಂಕರ್ ಎರಡು ಸಿಕ್ಸರುಗಳು ಮತ್ತು 5 ಬೌಂಡರಿಗಳ ಮೂಲಕ ದಕ್ಷಿಣ ಆಫ್ರಿಕಾವನ್ನು ಸವಾಲಿನ ಮೊತ್ತಕ್ಕೆ ಒಯ್ದರು. ಆದರೆ 173 ರನ್ ಬೆನ್ನಟ್ಟಿದ ಪಂದ್ಯದಲ್ಲಿ 6 ವಿಕೆಟ್‌ಗೆ 165 ರನ್ ಗಳಿಸಿ ಸೋಲನುಭವಿಸಿದರು.

ಇದಕ್ಕೆ ಮುಂಚೆ ಬ್ಯಾಟಿಂಗ್ ಮಾಡಿದ ಭಾರತದ ಪರ ಶಿಖರ್ ಧವನ್ 47 ರನ್ ಮತ್ತು ರೈನಾ 43 ರನ್ ಮೂಲಕ ಎರಡನೇ ವಿಕೆಟ್‌ಗೆ 65 ರನ್ ಜತೆಯಾಟವಾಡಿದರು.

Recent Comments

Leave Comments

footer
Top