• 17 January 2019 20:36
Jai Kannada
Jai Kannada
Blog single photo
February 23, 2018

52ರಲ್ಲೂ ಎಲಿಜಿಬಲ್ ಬ್ಯಾಚಲರ್ ಸಲ್ಮಾನ್ ಖಾನ್ 

ಮುಂಬೈ: ಹಿಂದಿ ಚಿತ್ರರಂಗದಲ್ಲಿ 52 ವರ್ಷ ಪ್ರಾಯದ ಸಲ್ಮಾನ್ ಖಾನ್ ಅತ್ಯಂತ ಎಲಿಜಿಬಲ್ ಬ್ಯಾಚಲರ್ ಎನಿಸಿಕೊಂಡಿದ್ದಾನೆ. ಅವನು ನೋಡುವುದಕ್ಕೆ ಹಾಟ್ ಆಗಿ, ಸುಂದರವಾಗಿ ಕಾಣಿಸುವುದಲ್ಲದೇ ಸೂಪರ್ ಶ್ರೀಮಂತನೂ ಮತ್ತು ಪ್ರಭಾವಶಾಲಿಯೂ ಆಗಿದ್ದಾನೆ. ಬಾಕ್ಸಾಫೀಸ್‌ನ ಅಂತಿಮ ರಾಜ ಸಲ್ಮಾನ್ ಚಿತ್ರೋದ್ಯಮದಲ್ಲಿ ಸೆಲಿಬ್ರೇಟೆಡ್ ವ್ಯಕ್ತಿತ್ವ ಹೊಂದಿದ್ದಾನೆ. ಇಷ್ಟೆಲ್ಲಾ ಗುಣಗಳಿದ್ದರೂ ಅವನು ಒಂಟಿಯಾಗಿರುವುದು ಅನೇಕ ಮಂದಿಗೆ ಬೇಸರ ಉಂಟುಮಾಡಿದೆ.

ಸಲ್ಮಾನ್ ಹೋದಕಡೆಯಲ್ಲೆಲ್ಲಾ ಒಂದು ಪ್ರಶ್ನೆ ಅವನನ್ನು ಸದಾ ಬೆನ್ನಟ್ಟುತ್ತದೆ. ನೀನು ಯಾವಾಗ ಮದುವೆಯಾಗುತ್ತೀಯಾ ಎನ್ನುವುದೇ ಆ ಪ್ರಶ್ನೆ. ತಾನು ಯಾರ ಜತೆಗೊ ಸಂಬಂಧ ಹೊಂದಿರುವುದನ್ನು ನಿರಾಕರಿಸುವ ಸಲ್ಮಾನ್, ತನಗೆ ಮದುವೆಯಾಗುವ ಇಚ್ಛೆಯಿಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದಾನೆ. ಆದರೆ ಜನರಿಗೆ ಮಾತ್ರ ಈ ಕುರಿತು ಮನದಟ್ಟಾಗಿಲ್ಲ. ಅವರು ಮಾತ್ರ ಈ ಪ್ರಶ್ನೆಯ ಬಾಣ ಎಸೆಯುತ್ತಲೇ ಇದ್ದಾರೆ.

ಇತ್ತೀಚೆಗೆ ಬಾಲಿವುಡ್ ಸುಲ್ತಾನ್ ಅವನಿಂದ ಅದೇ ಪ್ರಶ್ನೆಗೆ ಉತ್ತರ ಬಯಸಿದಾಗ, ಅವನು ಅವಿವಾಹಿತನಾಗಿ ಉಳಿದಿರುವುದಕ್ಕೆ ಅತ್ಯಂತ ಹಾಸ್ಯಾಸ್ಪದ ಕಾರಣವನ್ನು ಕೊಟ್ಟಿದ್ದ. ವಿವಾಹವು ದೊಡ್ಡ ಸಂಗತಿಯಾಗಿ ಮಾರ್ಪಟ್ಟಿದೆ. ವಿವಾಹವಾಗಲು ಲಕ್ಷಗಟ್ಟಲೆ, ಕೋಟಿಗಟ್ಟಲೆ ಖರ್ಚು ಮಾಡಬೇಕಾಗುತ್ತದೆ. ನನಗೆ ಅಷ್ಟೊಂದು ವೆಚ್ಚ ಮಾಡಲು ಆಗುವುದಿಲ್ಲವಾದ್ದರಿಂದ ಒಂಟಿಯಾಗಿ ಉಳಿದಿದ್ದೇನೆಂದು ಹೇಳಿದ್ದ.

ಸಲ್ಮಾನ್ ವಿವಾಹವಾಗದೇ ಉಳಿದಿರುವುದಕ್ಕೆ ಯಾವುದೇ ಒಂದು ನೆಪ ಹೇಳಿದ್ದಾನೆಂದು ಗೊತ್ತಿರುವ ವಿಚಾರವೇ. ರೊಮಾನಿಯಾ ಟಿವಿ ನಟಿ, ಗಾಯಕಿ ಲುಲಿಯಾ ವಂತೂರ್ ಜತೆ ಸಲ್ಮಾನ್ ಹೆಸರು ಕೇಳಿಬರುತ್ತಿದೆ. ಸಲ್ಮಾನ್ ಜತೆ ಲುಲಿಯಾ ಅನೇಕ ಬಾರಿ ಕಂಡುಬಂದಿದ್ದಳು. ಆದರೆ ಸಲ್ಮಾನ್ ಮತ್ತು ಲುಲಿಯಾ ಇದನ್ನು ನಿರಾಕರಿಸುತ್ತಾರೆ. ಸಲ್ಮಾನ್ ಜೀವನದ ಮಹಿಳೆಯರನ್ನು ಕುರಿತು ಹೇಳುವುದಾದರೆ, ಕತ್ರಿನಾ ಕೈಫ್ ಹೆಸರು ವಿಶೇಷವಾಗಿ ಕೇಳಿಬರುತ್ತದೆ. ಕೆಲವು ವರ್ಷಗಳ ಹಿಂದೆ ಅವಳು ಸಲ್ಮಾನ್ ಜತೆ ಡೇಟಿಂಗ್ ಮಾಡಿದ್ದಳು. ತನ್ನ ಮಾಜಿ ಲೇಡಿಲವ್ ಬಗ್ಗೆ ಮೆಚ್ಚುಗೆಯನ್ನು ಕೂಡ ಸಲ್ಮಾನ್ ವ್ಯಕ್ತಪಡಿಸಿದ್ದ.
.

Recent Comments

Leave Comments

footer
Top