• 24 March 2019 12:59
Jai Kannada
Jai Kannada
Blog single photo
February 19, 2018

ಪ್ರಧಾನಿ ಮೋದಿಗೆ ರೂಂ ಬುಕ್ ಮಾಡದ ಲಲಿತ ಮಹಲ್ ಪ್ಯಾಲೇಸ್ 

 ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಪರಿವಾರ 19 ಮತ್ತು 20ರಂದು ಎರಡು ದಿನಗಳ ಮೈಸೂರು ಭೇಟಿಗಾಗಿ ಲಲಿತ ಮಹಲ್ ಪ್ಯಾಲೇಸ್ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಲು ಬಯಸಿದ್ದರು. ಆದರೆ ಪ್ರಧಾನಮಂತ್ರಿಗೆ ಕೂಡ ರೂಂ ಬುಕ್ ಮಾಡಲು ಹೊಟೆಲ್ ಆಡಳಿತ ನಿರಾಕರಿಸಿದ ಘಟನೆ ಸಂಭವಿಸಿದೆ. ಅವರಿಗೆ ರೂಂ ನಿರಾಕರಿಸುವುದಕ್ಕೆ ಕಾರಣವೇನೆಂದರೆ ಹೊಟೆಲ್‌ನ ಎಲ್ಲಾ ರೂಂಗಳು ವಿವಾಹವೊಂದರ ಆರತಕ್ಷತೆಗಾಗಿ ಬುಕ್ ಆಗಿತ್ತು.


ವಿವಾಹದ ಆರತಕ್ಷತೆ ಸಮಾರಂಭ ಭಾನುವಾರ ಸಂಜೆ ನಿಗದಿಯಾಗಿದ್ದು, ಅದೇ ದಿನ ಪ್ರಧಾನಿ ಪ್ರವಾಸದ ವೇಳಾಪಟ್ಟಿ ನಿಗದಿಯಾಗಿತ್ತು. ಹೊಟೆಲ್‌ನಲ್ಲಿ ಮೂರು ರೂಂಗಳು ಮಾತ್ರ ಉಳಿದಿತ್ತು. ಭದ್ರತಾ ಕಾರಣಗಳಿಗಾಗಿ ಪ್ರಧಾನಿಯ ದೊಡ್ಡ ಸಿಬ್ಬಂದಿಗೆ ಕೇವಲ 3 ರೂಂ ಬುಕ್ ಮಾಡುವುದು ಸರಿಯಲ್ಲ ಎಂದು ಹೊಟೆಲ್ ತೀರ್ಮಾನಿಸಿತು.

ಆಗ ಜಿಲ್ಲಾಡಳಿತವು ಪ್ರಧಾನಿ ಮತ್ತು ಪರಿವಾರಕ್ಕೆ ಇನ್ನೊಂದು ಐಷಾರಾಮಿ ಹೊಟೆಲ್‌ ರಾಡಿಸನ್ ಬ್ಲೂನಲ್ಲಿ ರಾತ್ರೋರಾತ್ರಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿತು. ರಾಡಿಸನ್‌ನಲ್ಲಿ ಕೂಡ ಉದ್ಯಮಿಯೊಬ್ಬರ ಕುಟುಂಬದ ವಿವಾಹದ ಆರತಕ್ಷತೆಯ ವೇಳಾಪಟ್ಟಿ ಬದಲಿಸಿ, ಪ್ರಧಾನಮಂತ್ರಿ ಆಗಮನಕ್ಕೆ ಮುಂಚಿತವಾಗಿಯೇ ಮುಗಿಸಲಾಯಿತು.

Recent Comments

Leave Comments

footer
Top