• 24 March 2019 12:57
Jai Kannada
Jai Kannada
Blog single photo
February 18, 2018

ಕ್ಯಾತನಹಳ್ಳಿಯಲ್ಲಿ ಪುಟ್ಟಣ್ಣಯ್ಯ ಅಂತಿಮ ದರ್ಶನಕ್ಕೆ ಸಿದ್ಧತೆ 

ಮೈಸೂರು: ರೈತ ಸಂಘದ ನಾಯಕ ಪುಟ್ಟಣ್ಣಯ್ಯ ನಿನ್ನೆ ಪಾಂಡವಪುರದ ಬೇಬಿ ಬೆಟ್ಟದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯುವ ಜೋಡಿಗೆ ಶುಭ ಹಾರೈಸಿ ಹೋಗಿದ್ದರು. ಬಳಿಕ ಕಬಡ್ಡಿ ಪಂದ್ಯಕ್ಕೆ ಶುಭ ಕೋರಲು ತೆರಳಿದ್ದರು. ಕಬಡ್ಡಿ ಪಂದ್ಯ ವೀಕ್ಷಿಸುತ್ತಿರುವಾಗಲೇ ಹೃದಯಾಘಾತವಾಗಿತ್ತು.

ಇವೆರಡೂ ಪುಟ್ಟಣ್ಣಯ್ಯ ಅವರು ಭಾಗವಹಿಸಿದ ಕಡೆಯ ಎರಡು ಕಾರ್ಯಕ್ರಮಗಳು. ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

 ತಂದೆಯ ರೈತರ ಹೋರಾಟ ಮುಂದುವರಿಸಲು ಸಿದ್ಧವಾಗಿರುವುದಾಗಿ ಅವರ ಪುತ್ರ ದರ್ಶನ್ ತಿಳಿಸಿದ್ದಾರೆ. ಪುಟ್ಟಣ್ಣಯ್ಯ ಅವರ ಹಠಾತ್ ನಿಧನದಿಂದ ಅವರ ಬಂಧುಗಳು ಶೋಕತಃಪ್ತರಾಗಿದ್ದರು.

Recent Comments

Leave Comments

footer
Top