• 17 January 2019 20:53
Jai Kannada
Jai Kannada
Blog single photo
February 13, 2018

ಫಿಟ್ನೆಸ್‌ಗಾಗಿ  ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸ್ವಾನ್ ಡೈವ್ 

ಮುಂಬೈ: ಸೆಲೆಬ್ರಿಟಿ ತರಬೇತಿಗಾರ್ತಿ ಮತ್ತು ಫಿಟ್ನೆಸ್ ತಜ್ಞೆ ಯಾಸ್ಮಿನ್ ಕರಾಚಿವಾಲಾ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸ್ವಾನ್ ಡೈವ್ ಮಾಡುತ್ತಿರುವ ಚಿತ್ರ ಶೇರ್ ಮಾಡಿದ್ದಾರೆ.

ತನ್ನ ಆರೋಗ್ಯ ಮತ್ತು ಫಿಟ್ನೆಸ್ ಮಟ್ಟವನ್ನು ಉಳಿಸಿಕೊಳ್ಳಲು ಈ ನಾಯಕಿ ವ್ಯಾಯಾಮಕ್ಕೆ ಶರಣಾಗಿದ್ದಾರೆ. ಈ ವಿಡಿಯೊವನ್ನು ಕೆಲವೊಂದು ಪ್ರೇರಣೆ ನೀಡುವುದಕ್ಕಾಗಿ ಪೋಸ್ಟ್ ಮಾಡಲಾಗಿದ್ದರೂ, ಫಿಟ್ ಮತ್ತು ಆರೋಗ್ಯವಾಗಿರಲು ಅದು ನಿಮ್ಮನ್ನು ಪ್ರತಿದಿನ ಪ್ರೋತ್ಸಾಹಿಸುತ್ತದೆ. ಸ್ವಾನ್ ಡೈವ್ ಅನುಕೂಲಗಳ ಬಗ್ಗೆ ಬಣ್ಣಿಸಿದ ಕರಾಚಿವಾಲಾ, ಈ ವ್ಯಾಯಾಮ ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುತ್ತದೆ ಎಂದಿದ್ದಾರೆ.

ತಮ್ಮ ಸಿನೆಮಾಗಳಿಗೆ ಸಂಬಂಧಿಸಿದಂತೆ, ದೀಪಿಕಾ ವಿಶಾಲ್ ಭಾರದ್ವಾಜ್ ಜತೆ ಮೊದಲ ಚಿತ್ರಕ್ಕೆ ಸಜ್ಜಾಗಿದ್ದು, ಪಿಕು ಸಹ ನಟ ಇರ್ಫಾನ್ ಖಾನ್ ಕೂಡ ಅದರಲ್ಲಿ ಪಾತ್ರವಹಿಸಿದ್ದಾರೆ.

ಅವರ ವೈಯಕ್ತಿಕ ಜೀವನ ಕುರಿತು ಹೇಳುವುದಾದರೆ, ಬೆಂಗಳೂರಿನ ಸುಂದರಿ ರಣವೀರ್ ಸಿಂಗ್ ಜತೆ ಈ ವರ್ಷದ ಕೊನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹ ದಟ್ಟವಾಗಿದೆ.

Recent Comments

Leave Comments

footer
Top