Jai Kannada
Jai Kannada
Blog single photo
February 12, 2018

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಕ್ಷಾಮ ಸಾಧ್ಯತೆ : ಬಿಬಿಸಿ ವರದಿ 


ಬೆಂಗಳೂರು: ಬೆಂಗಳೂರಿನಲ್ಲಿ ಜನಸಂಖ್ಯೆ ಏರುತ್ತಿರುವ ನಡುವೆ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಬಾಧಿಸುತ್ತಿದೆ. ಆದರೆ ಕುಡಿಯುವ ನೀರಿನ ಸಮಸ್ಯೆ ವಿಕೋಪಕ್ಕೆ ಹೋಗಬಹುದು ಎಂದು ಬಿಬಿಸಿ ವರದಿಯಲ್ಲಿ ತಿಳಿಸಿದೆ. ಜಗತ್ತಿನಾದ್ಯಂತ 11  ನಗರಗಳ ಪೈಕಿ ಬೆಂಗಳೂರು ಕೂಡ ಕುಡಿಯುವ ನೀರಿನ ಕೊರತೆಯನ್ನು ಎದುರಿಸುವ ಸಾಧ್ಯತೆ ಕುರಿತು ಬಿಬಿಸಿ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟಿನ ಕುರಿತು ಅಧ್ಯಯನ ನಡೆಸುತ್ತಿರುವ ತಜ್ಞರು ಬರಪೀಡಿತ ದಕ್ಷಿಣ ಆಫ್ರಿಕಾ ನಗರದ ಸಂಕಷ್ಟವು ತಜ್ಞರು ಬಹುಕಾಲದಿಂದ ಎಚ್ಚರಿಸುತ್ತಿರುವ ನೀರಿನ ಕೊರತೆಗೆ ಜ್ವಲಂತ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿಗೆ ಹೆಣಗುತ್ತಿರುವ ಬೆಂಗಳೂರು ಕೂಡ ಕೇಪ್ ಟೌನ್ ರೀತಿಯ ಪರಿಸ್ಥಿತಿಯನ್ನೇ ಎದುರಿಸಬಹುದು ಎಂದು ಬಿಬಿಸಿ ವರದಿಯಲ್ಲಿ ತಿಳಿಸಿದೆ.

ಬೆಂಗಳೂರಿನ ಒಂದೇ ಒಂದು ಕೆರೆಯ ನೀರು ಕೂಡ ಕುಡಿಯಲು ಮತ್ತು ಸ್ನಾನಕ್ಕೆ ಯೋಗ್ಯವಾಗಿಲ್ಲ. ತೀವ್ರ ಜಲಮಾಲಿನ್ಯಕ್ಕೆ  ಬೆಂಗಳೂರಿನ ಜಲಮೂಲಗಳು ತುತ್ತಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಲ್ಲದೇ ಸಾವೊ ಪಾಲೊಸ ಬೀಜಿಂಗ್, ಕೈರೊ, ಜಕಾರ್ತಾ, ಮಾಸ್ಕೊ, ಇಸ್ತಾನ್‌ಬುಲ್, ಮೆಕ್ಸಿಕೊ, ಲಂಡನ್, ಟೋಕಿಯೊ ಮತ್ತು ಮಿಯಾಮಿ ನಗರಗಳು ಕೂಡ ನೀರಿನ ಬಿಕ್ಕಟ್ಟಿನ ಅಂಚಿನಲ್ಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 

Recent Comments

Leave Comments

footer
Top