• 19 February 2018 21:25
Jai Kannada
Jai Kannada
Blog single photo
February 11, 2018

ರಿಯಾಲಿಟಿ ಷೋನ ಆಡಿಷನ್‌ನಲ್ಲಿ ಯುವತಿಯರಿಗೆ ಅಶ್ಲೀಲ ಪ್ರಶ್ನೆಗಳು


ಬೆಂಗಳೂರು: ರಿಯಾಲಿಟಿ ಷೋಗೆ ಹೋಗಿದ್ದ ಯುವತಿಯರಿಗೆ ಆಡಿಷನ್ ಸಂದರ್ಭದಲ್ಲಿ ಕೇಳಿದ ಅಶ್ಲೀಲ ಪ್ರಶ್ನೆಗಳಿಗಳಿಂದ ದಿಗ್ಮೂಢರಾದರು.  ನಿನಗೆ ಸೆಕ್ಸ್ ಬಗ್ಗೆ ಗೊತ್ತಿದೆಯೇ, ನನ್ನ ಎದುರಿಗೆ ಬಟ್ಟೆ ಬಿಚ್ಚಲು ಆಗುತ್ತದಾ,  ಮುಂತಾದ ಪ್ರಶ್ನೆಗಳನ್ನು ಹುಡುಗಿಯರಿಗೆ ಆಡಿಷನ್ ಸಂದರ್ಭದಲ್ಲಿ ಕೇಳಲಾಯಿತು.

ಇದರಿಂದ ರೊಚ್ಚಿಗೆದ್ದ ಯುವತಿಯರು ಕೂಡಲೇ ಟಿವಿ 9 ಸ್ಟುಡಿಯೊದಲ್ಲಿ ತಮ್ಮ ಸಂಕಟಗಳನ್ನು ತೋಡಿಕೊಂಡರು. ಖಾಸಗಿ ಮನರಂಜನಾ ಚಾನೆಲ್ ವೊಂದು ನಡೆಸಿದ ಆಡಿಷನ್‌ನಲ್ಲಿ ಈ ರೀತಿ ಯುವತಿಯರಿಗೆ ಅಶ್ಲೀಲ ಪ್ರಶ್ನೆಗಳನ್ನು ಕೇಳಿದ್ದರಿಂದ ಯುವತಿಯರು ಮುಜುಗರಕ್ಕೀಡಾದರು.

ಬೆಂಗಳೂರು ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಈ ಆಡಿಷನ್ ನಡೆದಿತ್ತು. ಪಕ್ಕದಲ್ಲಿರೋ ಹುಡುಗನಿಗೆ ಮೂರು ಕಿಸ್ ಕೊಡು ಎಂದು ರಿಯಾಲಿಟಿ ಷೋನಲ್ಲಿ ಒಬ್ಬ ವ್ಯಕ್ತಿ ಹುಡುಗಿಯೊಬ್ಬಳಿಗೆ ಸೂಚಿಸಿದ್ದಾನೆ. ಶೋನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಲು ಬಂದಿದ್ದ ಯುವತಿಯರು ಇದರಿಂದ ರೊಚ್ಚಿಗೆದ್ದಿದ್ದರು.
 

Recent Comments

Leave Comments

footer
Top