• 19 February 2018 21:26
Jai Kannada
Jai Kannada
Blog single photo
February 11, 2018

ಇಂದಿರಾ ಕೂಡ ಜೈಲಿಗೆ ಹೋಗಿ ಬಂದವರು: ಪ್ರತಾಪ್ ಸಿಂಹ ತಿರುಗೇಟು


ಮೈಸೂರು: ಇಂದಿರಾ ಗಾಂಧಿ ಕೂಡ ಅಕ್ರಮವೆಸಗಿ ಜೈಲಿಗೆ ಹೋಗಿ ಬಂದಿದ್ದರು. ಇಂದಿರಾ ಏನು ಅರಮನೆಗೆ ಹೋಗಿಬಂದ್ರಾ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮಾತೆತ್ತಿದರೆ ಬಿಜೆಪಿ ನಾಯಕರಿಗೆ ಜೈಲಿಗೆ ಹೋಗಿ ಬಂದವರು ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಇಂದಿರಾ ಕೂಡ ಚುನಾವಣೆ ಅಕ್ರಮವೆಸಗಿ ಜೈಲಿಗೆ ಹೋಗಿಬಂದವರು ಎಂದು ಪ್ರತಾಪ್ ಸಿಂಹ ಹೇಳಿದರು.

.
ಅನಂತಕುಮಾರ್ ಟೀಕೆ
ರಿಯರ್ ಮಿರರ್ ಇಲ್ಲದೇ ಕಾರು ಓಡಿಸುವ ಚಾಲಕ ರಾಹುಲ್ ಗಾಂಧಿ. ರಾಜ್ಯದಲ್ಲಿ ವಾಹನಗಳಿಗೆ ಹಿಂಬದಿ ಕನ್ನಡಿ ತೆಗೆದುಹಾಕುವ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಯೋಚಿಸುತ್ತಿರಬಹುದು ಎಂದು ಕೇಂದ್ರ ಸಚಿವ ಅನಂತಕುಮಾರ್ ಟೀಕಿಸಿದ್ದಾರೆ. ಹಿಂಬದಿ ನೋಡಿಕೊಂಡು ವಾಹನ ಓಡಿಸುವುದರಿಂದ ಮೋದಿ ಅಪಘಾತಕ್ಕೆ ಗುರಿಯಾಗಬಹುದು ಎಂದು ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ವ್ಯಂಗ್ಯವಾಡಿದ್ದರು.

ವಾಹನ ಚಾಲಕರಿಗೆ ಮುಂಬದಿ ಕನ್ನಡಿ ಎಷ್ಟು ಮುಖ್ಯವೋ ಹಿಂಬದಿ ಕನ್ನಡಿಯೂ ಅಷ್ಟೇ ಮುಖ್ಯ. ರಾಹುಲ್‌ಗೆ ಹಿಂಬದಿ ಕನ್ನಡಿಯನ್ನು ನೋಡುವ ಅಭ್ಯಾಸವಿಲ್ಲವೆಂದು ಕಾಣುತ್ತದೆ. ಅದರಿಂದಾಗಿಯೇ ಕಾಂಗ್ರೆಸ್ ಮೇಲಿಂದ ಮೇಲೆ ಅಪಘಾತಗಳಿಗೆ ಗುರಿಯಾಗುತ್ತಿದೆ ಎಂದು ಅನಂತಕುಮಾರ್ ಟೀಕಿಸಿದರು.

Recent Comments

Leave Comments

footer
Top