• 19 February 2018 21:28
Jai Kannada
Jai Kannada
Blog single photo
February 08, 2018

ರಾಮಾಯಣ ಧಾರಾವಾಹಿಯ ನಂತರ ಈ ವಿಕಟ ನಗೆ: ಪ್ರಧಾನಿ ಮೋದಿ

ನವದೆಹಲಿ: ರಾಮಾಯಣ ಧಾರಾವಾಹಿಯ ನಂತರ ಈ ನಗು ಕೇಳುತ್ತಿದ್ದೇನೆ ಎಂದು ಕಾಂಗ್ರೆಸ್‌ನ ರೇಣುಕಾ ಚೌಧರಿ ಅವರ ವಿಕಟ ನಗೆಯ ಬಗ್ಗೆ ಪ್ರತಿಕ್ರಿಯಿಸುತ್ತಾ
 ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಆಧಾರ್ ಯೋಜನೆಯ ರೀತಿಯ ಯೋಜನೆಯ ಪರಿಕಲ್ಪನೆಯನ್ನು ಅಡ್ವಾಣಿ 1998ರಲ್ಲೇ ನೀಡಿದ್ದರು ಎಂಬ ಗಮನಾರ್ಹ ಅಂಶವನ್ನು ನರೇಂದ್ರ ಮೋದಿ ಗಮನಾರ್ಹವಾಗಿ ಪ್ರಸ್ತಾಪಿಸಿದ್ದರು. ಉಳಿದೆಲ್ಲಾ ಕಾಂಗ್ರೆಸ್ ಸದಸ್ಯರು ಗಂಭೀರವಾಗಿ ಕುಳಿತಿದ್ದರೂ ಕಾಂಗ್ರೆಸ್‌ನ ರೇಣುಕಾ ಚೌಧರಿ ಮಾತ್ರ ಗಹಗಹಿಸಿ ನಗತೊಡಗಿದರು.

ಇದರಿಂದ ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಯಾದ್ದರಿಂದ ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿ ನಿಮ್ಮಲ್ಲಿ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿ ಮಾಡಿ ಎಂದು ತಿಳಿಸಿದ್ದರು. ಆಗ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ, ಮಾನ್ಯ ಸಭಾಪತಿಗಳೇ ರೇಣುಕಾ ಚೌಧರಿ ಅವರಿಗೆ ಏನೂ ಹೇಳಬೇಡಿ. ಬಹುಶಃ ರಾಮಾಯಣ ಧಾರಾವಾಹಿಯ ಬಳಿಕ ಈ ರೀತಿಯ ವಿಕಟ ನಗೆ ಕೇಳುತ್ತಿರುವುದು ಇದೇ ಮೊದಲು ಎಂದು ನುಡಿದರು.

Recent Comments

Leave Comments

footer
Top