• 24 September 2018 11:08
Jai Kannada
Jai Kannada
Blog single photo
January 31, 2018

ಡಿ ವಿಲಿಯರ್ಸ್ 3 ಪಂದ್ಯಗಳಿಂದ ಹೊರಗೆ: ಟೀಂ ಇಂಡಿಯಾಗೆ ಬಲ 

ಟೀಂ ಇಂಡಿಯಾ ಬೌಲರುಗಳಿಗೆ ಮೈಚಳಿ ಹುಟ್ಟಿಸಿದ್ದ ದಕ್ಷಿಣ ಆಫ್ರಿಕಾದ ಅಗ್ರಮಾನ್ಯ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ ಭಾರತದ ವಿರುದ್ಧ ಮೊದಲ ಮೂರು ಪಂದ್ಯಗಳನ್ನು ಆಡುತ್ತಿಲ್ಲ. ಇದರಿಂದಾಗಿ ಟೀಂ ಇಂಡಿಯಾಗೆ ಗೆಲ್ಲುವ ಅವಕಾಶ ಹೆಚ್ಚಿದೆಯೆಂದೇ ಹೇಳಬಹುದು.

ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದು, ಅವರು ಆಡಲಿಳಿದರೆ, ಬೌಲರುಗಳು ತಿಣುಕಾಡುತ್ತಿದ್ದರು. ಡಿ ವಿಲಿಯರ್ಸ್ ಕೈಬೆರಳಿಗೆ ಗಾಯಮಾಡಿಕೊಂಡಿದ್ದು ಮೊದಲ ಮೂರು ಪಂದ್ಯಗಳಿಂದ ಹೊರಗುಳಿಯಲು ಕಾರಣವಾಗಿದೆ.

ವರು ಸಂಪೂರ್ಣ  ಗುಣಮುಖರಾಗಲು ಎರಡು ವಾರಗಳ ವಿಶ್ರಾಂತಿ ಅಗತ್ಯವಿದೆ. ದ.ಆಫ್ರಿಕಾ ಮತ್ತು ಭಾರತ ನಡುವೆ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಏಕದಿನ ಫೆ.1ರಂದು ಡರ್ಬನ್‌ನಲ್ಲಿ ನಡೆಯಲಿದೆ. 2 ಹಾಗೂ 3ನೇ ಏಕದಿನಗಳು ಸೆಂಚುರಿಯನ್ ಹಾಗೂ ಕೇಪ್‌ಟೌನ್‌ನಲ್ಲಿ ನಡೆಯಲಿದೆ.

Recent Comments

Leave Comments

footer
Top