• 16 October 2018 15:38
Jai Kannada
Jai Kannada
Blog single photo
January 24, 2018

ಪದ್ಮಾವತ್ ಚಿತ್ರ ಬಿಡುಗಡೆ ವಿರುದ್ಧ ಕರ್ಣಿಸೇನೆ ದಾಂಧಲೆ 

ಅಹಮದಾಬಾದ್: ವಿವಾದಾತ್ಮಕ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತ್ ಚಿತ್ರ ಪ್ರದರ್ಶಿಸಬೇಕೆಂದು ಸುಪ್ರೀಂಕೋರ್ಟ್ ರಾಜ್ಯಗಳಿಗೆ ಸೂಚನೆ ನೀಡಿರುವುದು ತಲೆನೋವಾಗಿ ಪರಿಣಮಿಸಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಪದ್ಮಾವತ್ ನಾಳೆ ತೆರೆಕಾಣಲಿದ್ದು,  ಕರ್ಣಿ ಸೇನೆ ಕಾರ್ಯಕರ್ತರು ಚಿತ್ರ ಬಿಡುಗಡೆಗೆ ವಿರೋಧಿಸಿ ನಿನ್ನೆ ರಾತ್ರಿ ಅಹಮದಾಬಾನ ಮಾಲ್‍ಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ.

 ಮಂಗಳವಾರ ಪದ್ಮಾವತ್ ಬಿಡುಗಡೆ ಪ್ರತಿಭಟಿಸಿ ಮೊಂಬತ್ತಿ ಮೆರವಣಿಗೆ ಮಾಡಿದ ಕಾರ್ಯಕರ್ತರು ಬಳಿಕ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಈ ದಾಂಧಲೆಯಲ್ಲಿ 150ಕ್ಕಿಂತ ಹೆಚ್ಚು ನಾಲ್ಕು ಚಕ್ರದ ವಾಹನಗಳು ಜಖಂಗೊಂಡಿವೆ.

ರಾತ್ರಿ 10 ಗಂಟೆಗೆ ಆಕ್ರೋಪೊಲಿಸ್ ಮತ್ತು ಹಿಮಾಲಯ ಮಾಲ್‌ಗಳಿಗೆ ಬೆಂಕಿ ಹಚ್ಚಿದರು. ಮಾಲ್ ಮತ್ತು ಥಿಯೇಟರ್ ಒಳಗಿದ್ದ ಜನರನ್ನು ಸುರಕ್ಷಿತವಾಗಿ ಬೇರೆಡೆಗೆ ಕರೆದೊಯ್ಯಲಾಗಿದೆ. ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಈ ಚಿತ್ರದ ಪ್ರದರ್ಶನಕ್ಕೆ ಗುಜರಾತ್ ಸರ್ಕಾರ ಮೊದಲಿಗೆ ನಿಷೇಧಿಸಿತ್ತು.

ಆದರೆ ಸುಪ್ರೀಂಕೋರ್ಟ್ ಆದೇಶದನ್ವಯ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಯಾವುದೇ ಹಿಂಸಾಚಾರ ಸಂಭವಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

Recent Comments

Leave Comments

footer
Top