• 17 December 2018 19:54
Jai Kannada
Jai Kannada
Blog single photo
January 19, 2018

ಉಗ್ರರ ಅಡಗುತಾಣಗಳ ಮೇಲೆ ದಾಳಿಗೆ ನೆತಾನ್‌ಯಾಹು ಸಹಮತ

ನವದೆಹಲಿ:  ವಿಶ್ವಸಂಸ್ಥೆ ಗುರುತಿಸಿದ ಭಯೋತ್ಪಾದಕರ ವಿರುದ್ಧ ಗಡಿ ರೇಖೆಯಲ್ಲಿ ಭಾರತ ಏಕಪಕ್ಷೀಯವಾಗಿ ಕಾರ್ಯಾಚರಣೆಗೆ ನಿರ್ಧರಿಸಿದ ಪಕ್ಷದಲ್ಲಿ ಅದಕ್ಕೆ ನಮ್ಮ ಒಮ್ಮತವಿದೆ ಎಂದು  ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್‌ಯಾಹೂ ತಿಳಿಸಿದ್ದಾರೆ.

ಭಾರತ ತನ್ನ ಗಡಿಯನ್ನು ರಕ್ಷಿಸಿಕೊಳ್ಳುವುದಕ್ಕೆ ಇಸ್ರೇಲ್ ಸಹಮತ ವ್ಯಕ್ತಪಡಿಸಿದ್ದನ್ನು ಇದು ಸೂಚಿಸುತ್ತದೆ.

ಶೇಷವಾದ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಇಂತಹ ಕ್ರಮಕ್ಕೆ ಇಸ್ರೇಲ್ ಬೆಂಬಲಿಸುತ್ತದೆಯೇ ಎಂಬ ಪ್ರಶ್ನೆಗೆ, ಈ ವಿಷಯದಲ್ಲಿ ನಮ್ಮಲ್ಲಿ ಒಮ್ಮತಾಭಿಪ್ರಾಯವಿದ್ದು, ಅದಕ್ಕಿಂತ ಹೆಚ್ಚಿಗೆ ಹೇಳಲು ಬಯಸುವುದಿಲ್ಲ ಎಂದು ತಿಳಿಸಿದರು. ನಾವು ಪಾಕಿಸ್ತಾನದ ಶತ್ರುವಲ್ಲ ಮತ್ತು ಪಾಕಿಸ್ತಾನ ಕೂಡ ನಮಗೆ ಶತ್ರುವಲ್ಲ ಎಂದರು.
ಪ್ಯಾಲೆಸ್ಟೀನ್ ವಿಷಯ ಕುರಿತು ಮಾತನಾಡುತ್ತಾ, ಇಸ್ರೇಲ್ ಪರಿಪೂರ್ಣ ರಾಷ್ಟ್ರವೆಂದು ನಾವು ಹೇಳುವುದಿಲ್ಲ. ಯಾವುದೇ ಸಮಸ್ಯೆಗಳಿಲ್ಲದ ರಾಷ್ಟ್ರವಿರುವುದು ನನಗೆ ಗೊತ್ತಿಲ್ಲ. ಆದರೆ ನಮ್ಮ ನೆರೆಹೊರೆಯ ರಾಷ್ಟ್ರಗಳ ಜತೆ ಶಾಂತಿಯ ಹಸ್ತ ಚಾಚುತ್ತೇವೆ ಎಂದರು. 

ಭಾರತ- ಇಸ್ರೇಲ್ ಬಾಂಧವ್ಯವು ನಾಗರಿಕತೆಗಳು ಮತ್ತು ಪ್ರಜಾಪ್ರಭುತ್ವಗಳ ಸಹಭಾಗಿತ್ವ ಎಂದು ಬಣ್ಣಿಸಿದರು.
ಗುಜರಾತಿನ ಪರಿಣತಿ ಕೇಂದ್ರವೊಂದರಲ್ಲಿ ಇಸ್ರೇಲಿನ ಕೃಷಿ ಜ್ಞಾನವನ್ನು ಭಾರತದ ರೈತರಿಗೆ ವರ್ಗಾಯಿಸಲಾಗುತ್ತಿದೆ. ತರಕಾರಿಗಳ ಬೆಳೆಯಲ್ಲಿ ತಮ್ಮ ಆದಾಯವು ನಾಲ್ಕು ಪಟ್ಟು ಹೆಚ್ಚಲು ನೆರವಾಗಿದೆ ಎಂದು ಐವರು ರೈತರು ತಮಗೆ ತಿಳಿಸಿದ್ದಾರೆ.

ಇದೊಂದು ಅದ್ಭುತ. ಇದರ ಅರ್ಥವೇನೆಂದರೆ, ನಾವು ಅದನ್ನು ಸರ್ವರಿಗೂ ವಿಸ್ತರಿಸಿದರೆ, ಅಪಾರ ಪ್ರಮಾಣದಲ್ಲಿ ಭಾರತೀಯರ ಜೀವನ ಮಟ್ಟವನ್ನು ನಾವು ಏರಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
 

Recent Comments

Leave Comments

footer
Top