• 09 April 2020 21:32
Jai Kannada
Jai Kannada
Blog single photo
March 26, 2020

 ಲಾಠಿ ಪ್ರಹಾರಕ್ಕೂ ಬಗ್ಗದ ಜನರಿಗೆ ಗಾಡಿ ಸೀಜ್ ಭಯ ಹುಟ್ಟಿಸಿದ ಪೊಲೀಸರು

ಬೆಂಗಳೂರು:  ಕಟ್ಟುನಿಟ್ಟಾದ ಲಾಕ್‌ಡೌನ್ ಘೋಷಿಸಿದ್ದರೂ ರಸ್ತೆಗಳಲ್ಲಿ ಅಡ್ಡಾಡುತ್ತಿರುವ ಜನರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು ಈಗ ಮತ್ತೊಂದು ವಿಧಾನದತ್ತ ಹೊರಳಿದ್ದಾರೆ. ವಿಜಯನಗರದಲ್ಲಿ ಸಂಚರಿಸುತ್ತಿದ್ದ ಕಾರೊಂದನ್ನು ಅಡ್ಡಗಟ್ಟಿ ದಾಖಲಾತಿಗಳಿಲ್ಲದೇ ಇರುವುದನ್ನು ಕಂಡು ಕಾರ್ ಸೀಜ್ ಮಾಡಿದ್ದಾರೆ.

ಯಾವುದೇ ವಾಹನಗಳಾಗಲಿ ಎಲ್ಲಿಗೆ ಹೋಗುತ್ತಿದ್ದೀರೆಂದು ಕೇಳಿ ಸೂಕ್ತ ಕಾರಣಗಳಿಲ್ಲದಿದ್ದರೆ ಗಾಡಿಯನ್ನು ಸೀಜ್ ಮಾಡುವ ಕ್ರಮಕ್ಕೆ ಮುಂದಾಗಿದ್ದಾರೆ. ನಿನ್ನೆ ಪೊಲೀಸರ ಕೇವಲ ಲಾಠಿ ರುಚಿಗೆ ಜನರು ಬಗ್ಗದೇ ಇಂದು ಕೂಡ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಸಿಕ್ಕಿಬಿದ್ದ ವಾಹನಗಳನ್ನು ಸೀಜ್ ಮಾಡುವುದಕ್ಕೆ ಪೊಲೀಸರು ನಿರ್ಧರಿಸಿದರು.

ಮಾತಿನ ಪೆಟ್ಟು, ಲಾಠಿ ಪೆಟ್ಟಿಗೆ ಜನರು ಜಗ್ಗದೇ ಇರುವುದರಿಂದ ಗಾಡಿಗಳನ್ನು ಸೀಜ್ ಮಾಡುವ ಮೂಲಕ ರಸ್ತೆಗಳಲ್ಲಿ ಓಡಾಡದಂತೆ ಭಯ ಹುಟ್ಟಿಸಲು ಪೊಲೀಸರು ಪ್ರಯತ್ನಿಸಿದ್ದಾರೆ.

Recent Comments

Leave Comments

footer
Top