• 09 April 2020 21:22
Jai Kannada
Jai Kannada
Blog single photo
March 26, 2020

ಚೀನಾ ಕೊರೊನಾ ವೈರಸ್ ಸೃಷ್ಟಿ ಮಾಡಿಲ್ಲ, ಪ್ರಸರಣ ಮಾಡಿಲ್ಲ: ಜಿ ರಾಂಗ್ 

ನವದೆಹಲಿ: ನಮ್ಮ ದೇಶ ಕೊರೊನಾ ವೈರಸ್ ಸೃಷ್ಟಿಮಾಡಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಅದನ್ನು ಪ್ರಸರಣ ಮಾಡಿಲ್ಲ ಎಂದು ಚೀನಾ ಬುಧವಾರ ಹೇಳಿದ್ದು, ಚೈನೀಸ್ ವೈರಸ್ ಮತ್ತು ವುಹಾನ್ ವೈರಸ್ ಮುಂತಾದ ಪದಗಳ ಬಳಕೆ ಸರಿಯಲ್ಲ ಎಂದು ತಿಳಿಸಿದೆ.

ಭಾರತದ ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್ ಈ ಕುರಿತು ಹೇಳುತ್ತಾ, ಕೊರೊನಾಗೆ ಚೀನಾದ ಕ್ಷಿಪ್ರಗತಿಯ ಪ್ರತಿಕ್ರಿಯೆ ಕುರಿತು ಅಂತಾರಾಷ್ಟ್ರೀಯ ಸಮುದಾಯ ಗಮನವಹಿಸಬೇಕು ಎಂದು ಹೇಳಿದರು. ರೋಗದ ವಿರುದ್ಧ ಹೋರಾಟಕ್ಕೆ ಚೀನಾ ಮತ್ತು ಭಾರತ ನಡುವೆ ಸಹಕಾರ ಕುರಿತು ವಿವರಿಸಿದ ರಾಂಗ್ ಉಭಯ ರಾಷ್ಟ್ರಗಳು ಕಷ್ಟದ ಸಮಯದಲ್ಲಿ ಸಾಂಕ್ರಾಮಿಕವನ್ನು ನಿಭಾಯಿಸಲು ಒತ್ತಾಸೆಯಾಗಿ ನಿಂತಿವೆ ಎಂದು ಹೇಳಿದರು. ಭಾರತ ಸರ್ಕಾರ ವೈದ್ಯಕೀಯ ವಸ್ತುಗಳನ್ನು ಪೂರೈಕೆ ಮಾಡಿ ವಿವಿಧ ರೀತಿಯಲ್ಲಿ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಬೆಂಬಲಿಸಿದೆ ಎಂದರು.

 ಚೀನಾದ ಪ್ರಯತ್ನಗಳ ಬಗ್ಗೆ ಹಿಯಾಳಿಸುವ ಜನರು ಮಾನವಕುಲದ ಆರೋಗ್ಯ ಮತ್ತು ಸುರಕ್ಷತೆಗೆ ಚೀನಾದ ಜನರ ತ್ಯಾಗಗಳನ್ನು ಕಡೆಗಣಿಸಿದ್ದಾರೆಂದು ಟೀಕಿಸಿದರು.

Recent Comments

Leave Comments

footer
Top