• 09 April 2020 22:56
Jai Kannada
Jai Kannada
Blog single photo
March 24, 2020

7 ತಿಂಗಳ ಬಳಿಕ ಮಾಜಿ ಸಿಎಂ ಓಮರ್ ಅಬ್ದುಲ್ಲಾಗೆ ಬಿಡುಗಡೆ ಭಾಗ್ಯ 

ಶ್ರೀನಗರ: ಜಮ್ಮು ಕಾಶ್ಮೀರ ಸರ್ಕಾರ 370ನೇ ವಿಧಿ ರದ್ದುಮಾಡಿದ ಬಳಿಕ ಬಂಧಿಸಿದ್ದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರ ಬಂಧನವನನ್ನು ಸುಮಾರು 7 ತಿಂಗಳ ಬಳಿಕ ಅಂತ್ಯಗೊಳಿಸಿದೆ. ಓಮರ್ ಅಬ್ದುಲ್ಲಾ,ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು 7 ತಿಂಗಳ ಹಿಂದೆ ಸರ್ಕಾರ ಗೃಹಬಂಧನದಲ್ಲಿರಿಸಿತ್ತು.

ಸುಪ್ರೀಂಕೋರ್ಟ್‌ನಲ್ಲಿ ಓಮರ್ ಅಬ್ದುಲ್ಲಾ ಗೃಹಬಂಧನ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಎತ್ತಿಕೊಳ್ಳುವ ಒಂದು ದಿನ ಮುಂಚಿತವಾಗಿದೇ ಈ ಓಮರ್ ಅಬ್ದುಲ್ಲಾ ಬಂಧಮುಕ್ತಿ ಆದೇಶ ಹೊರಬಿದ್ದಿದೆ. ಓಮರ್ ಬಿಡುಗಡೆಯಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ಅವರ ಸಹೋದರಿ ಸಫಿಯಾ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. ಓಮರ್ ಅಬ್ದುಲ್ಲಾರನ್ನು ಸತತವಾಗಿ ಬಂಧನದಲ್ಲಿರಿಸಿದ್ದಕ್ಕೆ ಸರ್ಕಾರ ನೀಡಿದ ಕಾರಣ ದುರ್ಬಲವಾಗಿತ್ತು. ಅವರ ಬಿಡುಗಡೆ ದಿಢೀರನೆ ಹೊರಬಿದ್ದಿದ್ದು, ನಾವು ಹರ್ಷಚಿತ್ತರಾಗಿದ್ದೇವೆ ಎಂದು ಅವರು ಹೇಳಿದರು.

ಕಳೆದ 2019ರ ಆಗಸ್ಟ್ 5ರಂದು ಓಮರ್ ಮತ್ತು ಮುಫ್ತಿ ಮೆಹಬೂಬಾ ಅವರನ್ನು ಬಂಧಿಸಿದ್ದ ಸರ್ಕಾರ ಫೆ.7ರಂದು ಪಿಎಸ್‌ಎ ಕಾಯ್ದೆ ದಾಖಲಿಸಿತ್ತು. ಏತನ್ಮಧ್ಯೆ ಅಪ್ನಿ ಪಕ್ಷದ ನಾಯ

Recent Comments

Leave Comments

footer
Top