• 09 April 2020 21:55
Jai Kannada
Jai Kannada
Blog single photo
March 23, 2020

ಕೊರೊನಾ ವೈರಸ್‌ಗೆ ವಿದೇಶಗಳಲ್ಲಿರುವ ಮೂವರು ಭಾರತೀಯರು ಬಲಿ 

ನವದೆಹಲಿ: ಕೊರೊನಾ ವೈರಸ್ ದಾಳಿಗೆ ವಿದೇಶಗಳಲ್ಲಿರುವ ಮೂವರು ಭಾರತೀಯರು ಬಲಿಯಾಗಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಇರಾನ್ , ಈಜಿಪ್ಟ್ ಮತ್ತು ಸ್ವೀಡನ್‌ನಲ್ಲಿರುವ ತಲಾ ಒಬ್ಬರು ಪುರುಷರು ಕೋವಿಡ್ 19ಕ್ಕೆ ಪಾಸಿಟಿವ್ ಆಗಿದ್ದರು. ಆದಾಗ್ಯೂ ಸ್ವೀಡನ್ನಿನ ಭಾರತೀಯ ತಮಿಳುನಾಡಿನ ಮೂಲದವರಾಗಿದ್ದು, ತಮಗೆ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇರಾನ್‌ನಲ್ಲಿ ಪ್ರಾಣ ತೆತ್ತ ಭಾರತೀಯ ಪೌರ 61 ವರ್ಷ ವಯಸ್ಸಿನ ಕೇಂದ್ರಾಡಳಿತ ಪ್ರದೇಶ ಲಡಕ್ ನಿವಾಸಿ. ಈಜಿಪ್ಟಿನಲ್ಲಿ ಮೃತಪಟ್ಟವರು 45 ವರ್ಷ ವಯಸ್ಸಿನವರು ಎಂದು ಮೂಲಗಳು ತಿಳಿಸಿವೆ. ವಿದೇಶಗಳಲ್ಲಿ ಸುಮಾರು 276 ಭಾರತೀಯ ಪೌರರು ಕೊರೊನಾ ಪಾಸಿಟಿವ್ ಆಗಿದ್ದು, ಅವರ ಪೈಕಿ ಹೆಚ್ಚಿನವರು ಇರಾನ್ ನಿವಾಸಿಗಳಾಗಿದ್ದಾರೆ.

ಇರಾನ್‌ನಲ್ಲಿರುವ 255 ಭಾರತೀಯರು, ಯುಎಇನಲ್ಲಿರುವ 12 ಮಂದಿ, ಇಟಲಿಯ ಐದು ಮಂದಿ ಮತ್ತು ಹಾಂಕಾಂಗ್, ಕುವೈಟ್, ರುವಾಂಡಾ ಮತ್ತು ಶ್ರೀಲಂಕಾದಲ್ಲಿರುವ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಲೋಕಸಭೆಯಲ್ಲಿ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

Recent Comments

Leave Comments

footer
Top