• 19 October 2018 12:22
Jai Kannada
Jai Kannada
Blog single photo
January 17, 2018

 ಹಿರಿಯ ನಟ , ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

 ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ತೀವ್ರ ಅಸ್ವಸ್ಥತೆಯಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ 2 ದಿನಗಳಿಂದ ಕಾಶಿನಾಥ್ ಶ್ರೀಶಂಕರ್  ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಾಶಿನಾಥ್ ಅವರ ನಿಧನ ಕನ್ನಡಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ಹಾಸ್ಯ ಅಭಿನಯದ ಮೂಲಕ ಹೊಸ ಅಲೆ ಸೃಷ್ಟಿಸಿದ್ದ ಕಾಶಿನಾಥ್ ಸಾವು ಅಭಿಮಾನಿಗಳಿಗೆ ದುಃಖ ತರಿಸಿದೆ. ಕಾಶಿನಾಥ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇತ್ತೀಚೆಗಷ್ಟೇ ಕನ್ನಡದ ಚೌಕ ಚಿತ್ರದಲ್ಲಿ ಅಭಿನಯಿಸಿದ್ದರು. ಅಪರೂಪದ ಅತಿಥಿಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.  ಸಾಕಷ್ಟು ಸಂಖ್ಯೆಯ ನಟರನ್ನು, ನಿರ್ದೇಶಕರನ್ನು ಹುಟ್ಟು ಹಾಕಲು ಕಾಶಿನಾಥ್ ಕಾರಣರಾಗಿದ್ದರು. ಅನಂತನ ಅವಾಂತರ, ಅನುಭವ ಮುಂತಾದ ಚಿತ್ರಗಳಲ್ಲಿ ಕಾಶೀನಾಥ್ ಅಭಿನಯಿಸಿದ್ದರು.
 

Recent Comments

Leave Comments

footer
Top