Jai Kannada
Jai Kannada
Blog single photo
January 17, 2018

2ನೇ ಟೆಸ್ಟ್‌ನಲ್ಲಿ ನೆಲಕಚ್ಚಿದ ಭಾರತಕ್ಕೆ ಸರಣಿ ಸೋಲು 

ಸೆಂಚುರಿಯನ್:  ಸ್ವದೇಶದಲ್ಲಿ ಹುಲಿಯಾಗಿದ್ದ ಭಾರತ ತಂಡವು ವಿದೇಶದಲ್ಲಿ ಇಲಿಯಂತಹ ಸ್ಥಿತಿ ಅನುಭವಿಸಿದೆ.  ಟೆಸ್ಟ್ ರಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲೂ ಸೋಲಪ್ಪುವ ಮೂಲಕ ಇನ್ನಿಂಗ್ಸ್‌ನಲ್ಲಿ 2-0ಯಿಂದ ಹಿನ್ನಡೆ ಅನುಭವಿಸುವ ಮೂಲಕ ಮುಖಭಂಗಕ್ಕೊಳಗಾಗಿದೆ.'

ದಕ್ಷಿಣ ಆಫ್ರಿಕಾದ ಬೌನ್ಸಿ ಪಿಚ್‌ಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ವೈಫಲ್ಯತೆಯನ್ನು ಇದು ಎತ್ತಿತೋರಿಸಿದೆ. ದಕ್ಷಿಣ ಆಫ್ರಿಕಾದ 287 ರನ್ ಸವಾಲಿಗೆ ಭಾರತ ಯಾವುದೇ ಕಠಿಣ ಹೋರಾಟ ನೀಡುವಲ್ಲಿ ವಿಫಲವಾಗಿ ಕೇವಲ 151ರನ್‌ಗಳಿಗೆ ಸರ್ವಪತನವನ್ನು ಕಂಡಿದೆ.

ಸ್ವದೇಶದಲ್ಲಿ ಎಲ್ಲಾ ತಂಡಗಳ ಮೇಲೂ ಉತ್ತಮ ಪ್ರದರ್ಶನ ನೀಡುವ ಭಾರತ ತಂಡ ವಿದೇಶಗಳ ಬೌನ್ಸ್ ಪಿಚ್‌ಗಳಲ್ಲಿ ಆಡುವುದಕ್ಕೆ ಇನ್ನಷ್ಟು ಪರಿಣತಿ ಸಾಧಿಸುವ ಅಗತ್ಯವನ್ನು ಈ ಸೋಲುಗಳು ಜಗಜ್ಜಾಹೀರು ಮಾಡಿದೆ. ರೋಹಿತ್ ಶರ್ಮಾ ಅವರೊಬ್ಬರು 47ರನ್ ಗಳಿಸಿದ್ದು ಬಿಟ್ಟರೆ, ಇನ್ನೆಲ್ಲರೂ ಹೆಚ್ಚು ಸ್ಕೋರ್ ಮಾಡುವಲ್ಲಿ ವಿಫಲರಾಗಿ ಬೇಗನೇ ಔಟಾಗಿದ್ದರಿಂದ ಕೇವಲ 151 ರನ್ ಗಳಿಸಲು ಶಕ್ತವಾಯಿತು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಕೇವಲ 5 ರನ್ನಿಗೆ ಔಟಾಗುವ ಮೂಲಕ ಭಾರತದ ಪತನಕ್ಕೆ ನಾಂದಿ ಹಾಡಿದರು.

Recent Comments

Leave Comments

footer
Top