• 17 February 2019 13:39
Jai Kannada
Jai Kannada
Blog single photo
January 16, 2018

ಭಾರತಕ್ಕೆ ಎರಡನೇ ಟೆಸ್ಟ್ ಗೆಲ್ಲುವ ಸದವಕಾಶ

ಸೆಂಚುರಿಯನ್: ದಕ್ಷಿಣ ಆಫ್ರಿಕಾ ನಾಯಕ ಡು ಪ್ಲೆಸಿಸ್ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ಭಾರತದ ನಿಖರ ಬೌಲಿಂಗ್ ದಾಳಿಗೆ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಟೀ ವೇಳೆಯಲ್ಲಿ ದಕ್ಷಿಣ ಆಫ್ರಿಕಾ 230ಕ್ಕೆ 7 ವಿಕೆಟ್ ಕಳೆದುಕೊಂಡು, ಒಟ್ಟಾರೆ 258 ಲೀಡ್ ಗಳಿಸಿತ್ತು. ಪ್ಲೆಸಿಸ್ 3 ಗಂಟೆಗಳ ಕಾಲ ಬ್ಯಾಟಿಂಗ್ ಆಡಿ ಅಜೇಯ 37 ರನ್ ಗಳಿಸಿದರು.

ಡು ಪ್ಲೆಸಿಸ್ ಮತ್ತು ಫಿಲಾಂಡರ್ 6ನೇ ವಿಕೆಟ್‌ಗೆ 46 ರನ್ ಗಳಿಸಿದರು. ನಿಧಾನವಾಗಿ ಆಡಿದರೂ ಮೊಹಮ್ಮದ್ ಶಮಿ ಬೌಲಿಂಗ್ ದಾಳಿಯಲ್ಲಿ 4 ಓವರಿಗೆ 3 ವಿಕೆಟ್ ಉರುಳಿದ ಬಳಿಕ ದಕ್ಷಿಣ ಆಫ್ರಿಕಾ ಹೆಚ್ಚು ವಿಕೆಟ್ ಕಳೆದುಕೊಳ್ಳದಿರಲು ನಿರ್ಧರಿಸಿದ್ದರು. ಫಿಲಾಂಡರ್ ಔಟಾದ ಬಳಿಕ ದ.ಆಫ್ರಿಕಾ ಬೇಗನೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 258ಕ್ಕೆ ಆಲೌಟ್ ಆಗಿದೆ.

ಭಾರತಕ್ಕೆ ಗೆಲ್ಲುವ ಗುರಿ 287 ರನ್‌ಗಳಾಗಿದ್ದು, 11 ರನ್‌ಗೆ ವಿಜಯ್ ಅವರ ವಿಕೆಟ್ ಕಳೆದುಕೊಂಡು ಎರಡನೇ ಇನ್ನಿಂಗ್ಸ್ ಆಡುತ್ತಿದೆ. ಭಾರತ ಇನ್ನಷ್ಟು ವಿಕೆಟ್ ಕಳೆದುಕೊಳ್ಳದೇ ವೇಗದಲ್ಲಿ ರನ್ ಗಳಿಸುವ ಮೂಲಕ ಈ ಪಂದ್ಯವನ್ನು ಗೆದ್ದುಕೊಂಡರೆ ಸರಣಿ 1-1ರಿಂದ ಸಮವಾಗಲಿದ್ದು, ಮೂರನೇ ಟೆಸ್ಟ್ ಪಂದ್ಯ ರೋಚಕವಾಗಿರುತ್ತದೆ ಮತ್ತು ಭಾರತಕ್ಕೆ ದ.ಆಫ್ರಿಕಾ ನೆಲದಲ್ಲಿ ಟೆಸ್ಟ್ ಗೆಲ್ಲುವ ಸದವಕಾಶವೂ ಒದಗಿಬರುತ್ತದೆ. ಭಾರತದ ಗೆಲುವಿನ ಹೊಣೆಗಾರಿಕೆ ಕೊಹ್ಲಿ ಮೇಲೆ ಬಿದ್ದಿದ್ದು, ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಗೆಲುವಿನ ಅವಕಾಶ ತೆರೆದುಕೊಳ್ಳುತ್ತದೆ.

Recent Comments

Leave Comments

footer
Top