• 17 January 2019 21:15
Jai Kannada
Jai Kannada
Blog single photo
January 14, 2018

ಪದ್ಮಾವತ್ ಚಿತ್ರ ಬಿಡುಗಡೆಯಾದರೆ ಜೌಹರ್ ಆಚರಣೆ 

ಜೈಪುರ/ಚಿತ್ತೂರುಗಢ:ಸಮಾಜದ ಒಂದು ಸಮುದಾಯದ ಜನರ ಗೌರವಕ್ಕೆ, ಮರ್ಯಾದೆಗೆ ಚ್ಯುತಿ ತರುವಂತಹ, ಶಾಂತಿಭಂಗವಾಗುವಂತಹ ವಿವಾದಾತ್ಮಕ ಪದ್ಮಾವತಿ ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು ರಜಪೂತ ಸಮುದಾಯದ ಜನರ ಭಾರೀ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಚಿತ್ತೂರುಗಢದ ಕ್ಷತ್ರಿಯ ಸಮುದಾಯದ ಮಹಿಳೆಯರು  ರಾಜಸ್ಥಾನದಲ್ಲಿ ವಿವಾದಾತ್ಮಕ ಚಿತ್ರ ಪದ್ಮಾವತ್ ಚಿತ್ರ ಬಿಡುಗಡೆಯಾದರೆ ಜೌಹರ್ (ಪ್ರಾಣಾರ್ಪಣೆ) ಆಚರಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಹೆಸರಾಂತ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಮತ್ತಷ್ಟು ಸಮಸ್ಯೆ ತಲೆದೋರಿದೆ.
ಚಿತ್ತೂರುಗಢದಲ್ಲಿ ನಡೆದ ಸರ್ವಸಮಾಜ ಸಭೆಯಲ್ಲಿ ಚಿತ್ರದ ಉದ್ದೇಶಿತ ಬಿಡುಗಡೆಗೆ ಹಂತ, ಹಂತ ಆಧಾರಿತ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ಈ ಸಭೆಯಲ್ಲಿ ಸುಮಾರು 500 ಜನರು ಭಾಗವಹಿಸಿದ್ದು, ಅವರ ಪೈಕಿ 100 ಮಹಿಳೆಯರು ಉನ್ನತ ವರ್ಗದ ಕುಟುಂಬಕ್ಕೆ ಸೇರಿದವರು.

ಚಿತ್ತೂರುಗಢದ ಸುತ್ತ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳಿಗೆ ಜನವರಿ 17ರಂದು ತಡೆಹಾಕುವುದಾಗಿ ರಜಪೂತ ಕರ್ನಿಯ ಸೇನೆಯ ವಕ್ತಾರ ತಿಳಿಸಿದರು.


ವಿವಾದಾತ್ಮಕ ಚಿತ್ರಕ್ಕೆ ಈಗಾಗಲೇ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಐದು ಬದಲಾವಣೆಗಳು ಮತ್ತು ಚಿತ್ರಕ್ಕೆ ಪದ್ಮಾವತ್ ಎಂದು ಮರುನಾಮಕರಣ ಮಾಡುವ ಮೂಲಕ ಜನವರಿ 25ರಂದು ದೇಶಾದ್ಯಂತ ಬೆಳ್ಳಿತೆರೆಯಲ್ಲಿ ಪ್ರದರ್ಶನಗೊಳ್ಳಲಿದೆ. ರಾಜಸ್ಥಾನ ಸರ್ಕಾರ ಮಾತ್ರ ಈ ಚಿತ್ರದ ಬಿಡುಗಡೆಯನ್ನು ರಾಜ್ಯದಲ್ಲಿ ನಿಷೇಧಿಸಿದೆ.

ಭಾನುವಾರ ಕರ್ನಿಕ್ ಸೇನೆಯ ನಿಯೋಗವು ಉದಯಪುರಕ್ಕೆ ಭೇಟಿ ನೀಡುವ ರಾಜನಾಥ್ ಸಿಂಗ್‌ ಅವರನ್ನು ಕಂಡು ಚಿತ್ರ ಪ್ರದರ್ಶನವನ್ನು ನಿಲ್ಲಿಸುವಂತೆ ಆಗ್ರಹಿಸಲಿದೆ. ಇವೆಲ್ಲ ಪ್ರಯತ್ನಗಳ ನಡುವೆಯೂ ಚಿತ್ರ ಬಿಡುಗಡೆಯಾದರೆ ಕ್ಷತ್ರಿಯ ಸಮಾಜದ ಮಹಿಳೆಯರು ಜೌಹರ್ ಪದ್ಧತಿ ಆಚರಿಸುತ್ತಾರೆಂದು ವಕ್ತರಾ ವೀರೇದ್ರ ಸಿಂಗ್ ಹೇಳಿದ್ದಾರೆ.
 

Recent Comments

Leave Comments

footer
Top