• 19 August 2018 05:13
Jai Kannada
Jai Kannada
Blog single photo
January 14, 2018

ನಮ್ಮ ನಡುವೆ ಯಾವುದೇ ಬಿಕ್ಕಟ್ಟಿಲ್ಲ: 4 ಜಡ್ಜ್‌ಗಳ ಯುಟರ್ನ್ 

ನವದೆಹಲಿ: ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ನಾಲ್ವರು ನ್ಯಾಯಾಧೀಶರು ಈಗ ತಮ್ಮ ಸಮಸ್ಯೆ ಇತ್ಯರ್ಥಕ್ಕೆ ಹೊರಗಿನವರ ಹಸ್ತಕ್ಷೇಪ ಬೇಕಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿಲ್ಲ, ಕೇವಲ ನಿಯಮಗಳ ಅನುಸರಣೆಯಲ್ಲಿ ತೊಂದರೆಗಳಿಗೆ ಮಾತ್ರ ನಾವು ಆಕ್ಷೇಪಣೆ ವ್ಯಕ್ತಪಡಿಸಿದ್ದೇವೆ ಎಂದು ನ್ಯಾ. ಕುರಿಯನ್ ಜೋಸೆಫ್ ಹೇಳಿದರು. ಆಂತರಿಕ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ.

ಹೊರಗಿನವರ ಮಧ್ಯಪ್ರವೇಶ ಅಗತ್ಯವಿಲ್ಲ ಎಂದೂ ಅವರು ಹೇಳಿದರು. ಮುಖ್ಯನ್ಯಾಯಮೂರ್ತಿಗಳಿಗೆ ನಾವು ಈ ಮುಂಚೆ ಒಪ್ಪಿಸಿದ್ದ ಪತ್ರದ ಒಕ್ಕಣೆಯನ್ನು ನಾವು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದೇವೆ ಎಂದೂ ಕುರಿಯನ್ ಹೇಳಿದರು. ಭಾರತದ ವಕೀಲರ ಸಂಘ ಬಿಕ್ಕಟ್ಟು ಶಮನಕ್ಕಾಗಿ 7 ಮಂದಿಯ ಸಮಿತಿ ಕೂಡ ರಚನೆ ಮಾಡಿತ್ತು.

ಈ ಕುರಿತು ಇನ್ನೂ ಇಬ್ಬರು ನ್ಯಾಯಾಧೀಶರು, ನ್ಯಾಯಾಂಗದಲ್ಲಿ ಯಾವುದೇ ಬಿಕ್ಕಟ್ಟಿಲ್ಲ, ಮುಖ್ಯ ನ್ಯಾಯಾಧೀಶರ ವಿರುದ್ಧ ನಾವು ಬಂಡಾಯವನ್ನೂ ಎದ್ದಿಲ್ಲ ಎಂದು ಹೇಳಿದ್ದಾರೆ. ನ್ಯಾಯಮೂರ್ತಿಗಳ ಗುಂಪಿನಲ್ಲಿದ್ದ ರಂಜನ್ ಗೊಗೋಯಿ ಅವರನ್ನು ಈ ಕುರಿತು ನೀವು ನ್ಯಾಯಾಂಗದ ಶಿಸ್ತು ಉಲ್ಲಂಘನೆ ಮಾಡಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ ಅವರು ನಾನೀಗ ಏನನ್ನೂ ಹೇಳಲಾರೆ ಎಂದು ಆ ಪ್ರಶ್ನೆಯಿಂದ ನುಣುಚಿಕೊಂಡರು.

Recent Comments

Leave Comments

footer
Top