• 18 November 2018 13:55
Jai Kannada
Jai Kannada
Blog single photo
January 13, 2018

ಮನೆ ಬಳಿ ಆಟವಾಡುತ್ತಿದ್ದ ಬಾಲಕ ಒಂಟಿ ಸಲಗಕ್ಕೆ ಬಲಿ 

ಹಾಸನ:  ಹಾಸನದ ಆಲೂರಿನ ಕೊಡಗತ್ತವಳ್ಳಿಯಲ್ಲಿ ಮನೆಬಳಿ ನಿಂತಿದ್ದ ಭರತ್(14) ಎಂಬ ಬಾಲಕನನ್ನು ಎಳೆದೊಯ್ದ ಸಲಗವೊಂದು ಕೊಂದಿರುವ ದಾರುಣ ಘಟನೆ ಸಂಭವಿಸಿದೆ.

ಬಾಲಕ ಸಂಕ್ರಾಂತಿ ರಜೆ ಸಲುವಾಗಿ ತನ್ನ ಅಜ್ಜಿ ಮನೆಗೆ ಬಂದಿದ್ದ. ಮನೆಯ ಬಳಿಯ ಅಂಗಳದಲ್ಲಿ ಭರತ್ ಇಂದು ಮುಂಜಾನೆ  ಇತರೆ ಸ್ನೇಹಿತರೊಂದಿಗೆ ಮನೆ ಮುಂದೆ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ  ಒಂಟಿ ಸಲಗವೊಂದು ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಸ್ಥಳದಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಒಂಟಿ ಸಲಗವು ಬಾಲಕನನ್ನು ಸೊಂಡಿಲಿನಲ್ಲಿ ಎತ್ತಿಕೊಂಡು ದೂರ ಕರೆದುಕೊಂಡು ಹೋಗಿ ಕಾಲಿನಿಂದ ತುಳಿದು ಕೊಂದು ಹಾಕಿದೆ.

ಮನೆಯಿಂದ ಸ್ವಲ್ಪ ದೂರದಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Recent Comments

Leave Comments

footer
Top