• 20 January 2018 12:49
Jai Kannada
Jai Kannada
Blog single photo
January 13, 2018

ಐಪಿಎಲ್ ಹರಾಜಿಗೆ 1122 ಆಟಗಾರರ ಸಹಿ 

ನವದೆಹಲಿ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಯುವರಾಜ್ ಸಿಂಗ್, ಜೋ ರೂಟ್ ಸೇರಿದಂತೆ 1122 ಆಟಗಾರರು ಈ ಸಾಲಿನ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಹಿ ಮಾಡಿದ್ದಾರೆಂದು ಬಿಸಿಸಿಐ ಪ್ರಕಟಿಸಿದೆ.

 ಇದೇ 27 ಮತ್ತು 28ರಂದು ಐಪಿಎಲ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ. ಭಾರತದ 778 ಆಟಗಾರರು ಸೇರಿ 282 ವಿದೇಶಿ ಆಟಗಾರರು ಐಪಿಎಲ್ ಟೂರ್ನಿಗೆ ನೊಂದಾಯಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ನ 26 ಆಟಗಾರರು, ಆಸ್ಟ್ರೇಲಿಯಾದ 58, ನ್ಯೂಜಿಲೆಂಡ್ 30 ಮತ್ತು ದಕ್ಷಿಣ ಆಫ್ರಿಕಾದ 57 ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ವಿಂಡೀಸ್‌ನ 39 ಆಟಗಾರರು ಕೂಡ ಹರಾಜಿಗೆ ಪ್ರವೇಶಿಸಿದ್ದಾರೆ.
 

Recent Comments

Leave Comments

footer
Top