• 21 October 2018 22:10
Jai Kannada
Jai Kannada
Blog single photo
January 13, 2018

7 ಜನರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ

 ಮುಂಬೈ: ಐವರು ಒಎನ್‌ಜಿಸಿ ನೌಕರರನ್ನು ಹೊತ್ತಿದ್ದ ಪವನ್ ಹ್ಯಾನ್ಸ್ ಹೆಲಿಕಾಪ್ಟರ್‌ವೊಂದು ಜುಹು ವಿಮಾನನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಕಾಣೆಯಾಗಿದೆ. ಇಬ್ಬರು ಪೈಲಟ್‌ಗಳು ಮತ್ತು ಐವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್, ನಿಯೋಜಿತ ತೈಲ ರಿಗ್ ಬಳಿ ಇಳಿದಿಲ್ಲ ಮತ್ತು ಅದರ ಸುಳಿವಿನ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ತಿಳಿದುಬಂದಿದೆ.

ಬೆಳಿಗ್ಗೆ 10.30ಕ್ಕೆ ತೈಲ ರಿಗ್‌ನ  ಸಂಚಾರ ನಿಯಂತ್ರಣ ಕೇಂದ್ರದ ಜತೆ ಹೆಲಿಕಾಪ್ಟರ್ ಕೊನೆಯ ಬಾರಿ ಸಂಪರ್ಕ ಸಾಧಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಒಎನ್‌ಜಿಸಿ ಭಾರತೀಯ ಕರಾವಳಿ ಪಡೆಗೆ ಎಚ್ಚರಿಸಿತ್ತು.

ನಿಯಮಾವಳಿ ಪ್ರಕಾರ, ಪೈಲಟ್‌ಗಳು ಜುಹುನ ತಮ್ಮ ರೇಡಿಯೊ ಸಂಪರ್ಕವನ್ನು ತೈಲ ರಿಗ್‌ಗೆ ಬದಲಾಯಿಸಿದ್ದರು ಎಂದು ಮೂಲವೊಂದು ತಿಳಿಸಿದೆ. ಸುಮಾರು 9 ಕಿಮೀ ದೂರದವರೆಗೆ ಅವರು ರಿಗ್  ಸಂಚಾರ ನಿಯಂತ್ರಕರ ಜತೆ ಸಂಪರ್ಕ ಹೊಂದಿದ್ದರು. ಅದಾದ ಬಳಿಕ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
 

Recent Comments

Leave Comments

footer
Top