• 18 August 2018 20:00
Jai Kannada
Jai Kannada
Blog single photo
January 11, 2018

ಉಪಗ್ರಹ ಉಡಾವಣೆಯಲ್ಲಿ ಮತ್ತೊಂದು ವಿಕ್ರಮಕ್ಕೆ ಇಸ್ರೊ ಸಜ್ಜು 

ನವದೆಹಲಿ: ಉಪಗ್ರಹ ಉಡಾವಣೆಯಲ್ಲಿ ವಿಶ್ವವ್ಯಾಪಿ ಖ್ಯಾತಿ ಗಳಿಸಿರುವ ಇಸ್ರೊ ಇನ್ನೊಂದು ರಾಕೆಟ್ ನಭಕ್ಕೆ ಹಾರಿಸಲು ಸಿದ್ಧತೆ ನಡೆಸಿದೆ. ಧ್ರವೀಕೃತ ಉಪಗ್ರಹ ಉಡಾವಣೆ ವಾಹನ ಪಿಎಸ್‌ಎಲ್‌ವಿ ಇಂದು ಬೆಳಿಗ್ಗೆ 9.29ಕ್ಕೆ  ಆಂಧ್ರದ ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಉಡಾವಣೆಯಾಗಲು ಕ್ಷಣಗಣನೆ ಆರಂಭವಾಗಿದೆ. ಇದು ಭಾರತದ 100ನೇ ಉಪಗ್ರಹವನ್ನು ಇನ್ನೂ ಇತರೆ 30 ಉಪಗ್ರಹಗಳೊಂದಿಗೆ ಬಾಹ್ಯಾಕಾಶಕ್ಕೆ ಒಯ್ಯಲಿದೆ.

ಉಡಾವಣೆಯನ್ನು ಬಾಹ್ಯಾಕಾಶದಲ್ಲಿ ಕಸವಿದ್ದಿದ್ದರಿಂದ ಒಂದು ನಿಮಿಷ ಮುಂದೂಡಲಾಯಿತು.  ಕಳೆದ ಬಾರಿ ಉಡಾವಣೆ ಮಾಡಿದ್ದ ಖಾಸಗಿ ನಿರ್ಮಿತ ಉಪಗ್ರಹವು ಆಗಸ್ಟ್ 31ರಂದು ಸಣ್ಣ ಅವಘಡದಿಂದ ವಿಫಲವಾಗಿತ್ತು.

ಪಿಎಸ್‌ಎಲ್‌ವಿ ಒಯ್ಯುವ ಇತರೆ 30 ಉಪಗ್ರಹಗಳಲ್ಲಿ ಭಾರತದ ಎರಡು ಉಪಗ್ರಹಗಳು ಮತ್ತು ಕೆನಡಾ, ಫಿನ್ಲೆಂಡ್, ಫ್ರಾನ್ಸ್, ಕೊರಿಯಾ, ಯುಕೆ ಮತ್ತು ಅಮೆರಿಕದ ಒಟ್ಟು 28 ಉಪಗ್ರಹಗಳು ಸೇರಿವೆ.
ಈ ಯಾತ್ರೆಯು ವಿಶಿಷ್ಠವಾಗಿದ್ದು, ಉಪಗ್ರಹಗಳನ್ನು ಎರಡು ಕಕ್ಷೆಗಳಲ್ಲಿ ಉಡಾವಣೆ ಮಾಡಲಾಗುತ್ತದೆ. 30 ಉಪಗ್ರಹಗಳನ್ನು 550 ಕಿಮೀ ಎತ್ತರದ ಕಕ್ಷೆಯಲ್ಲಿ ಇರಿಸಿದರೆ, ಇನ್ನೊಂದು ಉಪಗ್ರಹವನ್ನು 359 ಕಿಮೀ ಕಕ್ಷೆಯಲ್ಲಿ ಇರಿಸಲಾಗುತ್ತದೆ.

ಇದನ್ನು ಬಹು ದಹಿಸುವಿಕೆ ತಂತ್ರಜ್ಞಾನದ ಮೂಲಕ ಸಾಧಿಸಲಾಗುತ್ತದೆ. ಇದರಲ್ಲಿ ರಾಕೆಟ್ ಎಂಜಿನ್‌ನ ಎತ್ತರದ ನಿಯಂತ್ರಣಕ್ಕೆ ಸ್ವಿಚ್ ಆಫ್ ಮತ್ತು ಆನ್ ಮಾಡಲಾಗುತ್ತದೆ.

ಉಡಾವಣೆ ಸೇರಿದಂತೆ ಎರಡು ಕಕ್ಷೆಗಳಲ್ಲಿ ಉಪಗ್ರಹಗಳನ್ನು ಇರಿಸುವ ಪ್ರಕ್ರಿಯೆ 2 ಗಂಟೆ 21 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 

ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಡೀ ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದೆ. ಆದರೆ ಇತರೆ ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾರತ ಹಿಂದುಳಿದಿದೆಯೆಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರ ಸಂಶೋಧನೆಗಳಿಗೆ ಹೆಚ್ಚೆಚ್ಚು ಮಹತ್ವ ನೀಡುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಪರಿಣತಿ ಸಾಧಿಸಿದಾಗ, ನಾವು ವಿದೇಶಗಳಿಂದ ದುಬಾರಿ ಹಣ ತೆತ್ತು ವಿದ್ಯುತ್ ಉಪಕರಣಗಳನ್ನು, ರಕ್ಷಣೆ ಸಾಮಗ್ರಿಗಳನ್ನು, ಯುದ್ಧವಿಮಾನಗಳನ್ನು ಆಮದು ಮಾಡಿಕೊಳ್ಳುವುದು ತಪ್ಪುತ್ತದೆ.

Recent Comments

Leave Comments

footer
Top