• 21 October 2018 22:10
Jai Kannada
Jai Kannada
Blog single photo
January 10, 2018

ಕರ್ನಾಟಕ ಚುನಾವಣೆ ಮೇಲೆ ನರೇಂದ್ರ ಮೋದಿ ಕಣ್ಣು 

ನವದೆಹಲಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪಕ್ಷದ ಪ್ರಧಾನಕಾರ್ಯದರ್ಶಿಗಳನ್ನು ಮತ್ತು ಹಿರಿಯ ಮುಖಂಡರನ್ನು ಗುರುವಾರ ದೆಹಲಿಯಲ್ಲಿ ಭೇಟಿ ಮಾಡಲಿದ್ದು, ಪಕ್ಷದ ಸಹೋದ್ಯೋಗಿಗಳಿಗೆ ಭೋಜನಕೂಟದ ವ್ಯವಸ್ಥೆ ಕೂಡ ಮಾಡಿದ್ದಾರೆ. 2018ರಲ್ಲಿ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜುಗೊಳಿಸುವುದು ಇವರ ಭೇಟಿಯ ಉದ್ದೇಶವೆಂದು ಹೇಳಲಾಗುತ್ತಿದೆ.

2018ರಲ್ಲಿ ಕರ್ನಾಟಕ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರ, ಚತ್ತೀಸ್‌ಗಢ ವಿಧಾನಸಭೆ ಚುನಾವಣೆ ಎದುರಿಸಲಿವೆ. ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ವಿವಿಧ ರಾಜ್ಯಗಳ ರಾಜಕೀಯ ಸನ್ನಿವೇಶಗಳನ್ನು ಕುರಿತು ಮುಖಂಡರೊಂದಿಗೆ ಚರ್ಚಿಸಲಿದ್ದಾರೆ.

ವಿಧ ರಾಜ್ಯಗಳ ಸರ್ಕಾರಿ ಯೋಜನೆಗಳ ಸ್ಥಿತಿಗತಿ ಕುರಿತು ಹಾಗೂ ಅವುಗಳ ಲೋಪದೋಷಗಳು ಮತ್ತು ಮುಖ್ಯಾಂಶಗಳ ಬಗ್ಗೆ ಕೂಡ ಚರ್ಚಿಸಲಿದ್ದಾರೆ. ಈ ನಡುವೆ, 2000ನೇ ಇಸವಿಯಲ್ಲಿ ಜನಿಸಿದ ಮತದಾರರನ್ನು ಬಿಜೆಪಿ ಗುರಿಯಾಗಿಸಿಕೊಳ್ಳುವ ನಿರೀಕ್ಷೆಯಿದೆ.

ಇಂತಹ ಮತದಾರರ ಸಂಖ್ಯೆ ಸುಮಾರು 2 ಕೋಟಿಯಷ್ಟಿದೆ. ಲೋಕಸಭೆ ಚುನಾವಣೆಯಲ್ಲಿ ಈ ಮತದಾರರನ್ನು ಓಲೈಸಲು ಬಿಜೆಪಿಯ ಸಾಮಾಜಿಕ ಜಾಲ ತಾಣ ಶ್ರಮಿಸುತ್ತಿದೆ. ಈ ಉದ್ದೇಶಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಕೂಡ ಬಿಡುಗಡೆಯಾಗಲಿದ್ದು, ಈ ಆ್ಯಪ್ ಹೆಸರು ಮಿಲೇನಿಯಂ ವೋಟ್ ಕ್ಯಾಂಪೇನ್ ಎಂದಾಗಿದ್ದು, ಜನವರಿ 18ರಂದು ಉದ್ಘಾಟಿಸಲಾಗುತ್ತದೆ.

Recent Comments

Leave Comments

footer
Top