• 21 October 2018 22:54
Jai Kannada
Jai Kannada
Blog single photo
January 10, 2018

ಈಶ್ವರಪ್ಪ ಮೆದುಳಿಗೂ ನಾಲಗೆಗೂ ಲಿಂಕ್ ತಪ್ಪೋಗಿದೆ: ಸಿದ್ದರಾಮಯ್ಯ

ಬಿಜೆಪಿ ನಾಯಕ ಈಶ್ವರಪ್ಪಗೆ ಮೆದುಳೇ ಇಲ್ಲ. ಮೆದುಳಿಗೂ ನಾಲಗೆಗೂ ಲಿಂಕ್ ತಪ್ಪೋಗಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಈಶ್ವರಪ್ಪ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ. ಸಂಸದೀಯ ಭಾಷೆ ಎಂದರೆ ಬಿಜೆಪಿಗೆ ಗೊತ್ತೇ ಇಲ್ಲ. ಜನಪ್ರತಿನಿಧಿಗಳಿಗೆ ಮಾತಿನ ಮೇಲೆ ಹಿಡಿತವಿರಬೇಕು ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.   ಹುಚ್ಚನ ಕೈಯಲ್ಲಿ ರಾಜ್ಯದ ಆಡಳಿತ ನೀಡಲಾಗಿದೆ ಎಂದು ಈಶ್ವರಪ್ಪ ಹೇಳಿದ್ದರು.

  ಸಿದ್ದರಾಮಯ್ಯ ಅವರನ್ನು ತಲೆತಿರುಕ ಎಂದು ಯಡಿಯೂರಪ್ಪ ಕರೆದಿದ್ದರು. ಸಿದ್ದರಾಮಯ್ಯ ಅವರು ಬಿಜೆಪಿ, ಬಜರಂಗದಳ ಮತ್ತು ಆರ್‌ಎಸ್ಸೆಸ್‌ನವರು ಕೂಡ ಉಗ್ರಗಾಮಿಗಳೇ ಎಂದು ಹೇಳಿದ್ದಕ್ಕೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಮೇಲಿನಂತೆ ಖಾರವಾಗಿ ಪ್ರತಿಕ್ರಿಯಿಸಿದ್ದರು.

ಭಯೋತ್ಪಾದನೆಗೆ, ಹಿಂಸೆಗೆ ಪ್ರಚೋದಿಸುವವರು ಕೂಡ ಉಗ್ರಗಾಮಿಗಳೇ ಎಂಬರ್ಥದಲ್ಲಿ ಸಿದ್ದರಾಮಯ್ಯ ಹೇಳಿದ್ದರು.

Recent Comments

Leave Comments

footer
Top