• 19 November 2018 15:33
Jai Kannada
Jai Kannada
Blog single photo
January 10, 2018

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದ ಆಸಾಮಿ 

ನೆಲಮಂಗಲ: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಲಕ್ಷ್ಮಿನರಸಮ್ಮ ಕೊಲೆಯಾದ ಮಹಿಳೆ.

ಕುಡಿದ ಅಮಲಿನಲ್ಲಿ ಪತಿ ವೆಂಕಟೇಶ್ ಕೋಲಿನಿಂದ ಹೊಡೆದ. ಇದಕ್ಕೆ ತಿರುಗಿ ಬಿದ್ದ ಪತ್ನಿಯ ಮೇಲೆ ತೀವ್ರ ಕೋಪದಿಂದ ಕಲ್ಲೊಂದನ್ನು ಎತ್ತಿಹಾಕಿದ್ದರಿಂದ ಪತ್ನಿ ಸ್ಥಳದಲ್ಲೇ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ.

ಪೊಲೀಸರು ವೆಂಕಟೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ವೆಂಕಟೇಶ್ ಸದಾ ಕುಡಿದು ಗಲಾಟೆ ಮಾಡುತ್ತಿದ್ದರಿಂದ ಪತ್ನಿ ಅವನ ಮೇಲೆ ಸಿಟ್ಟಾಗಿದ್ದಳು. ಇದಕ್ಕಾಗಿ ಅವಳು ಪತಿಯ ಮೇಲೆ ತಿರುಗಿ ಬಿದ್ದಿದ್ದೇ ಅವಳ ಪ್ರಾಣಕ್ಕೆ ಕುತ್ತು ತಂದಿದೆ.

Recent Comments

Leave Comments

footer
Top