• 19 November 2018 07:08
Jai Kannada
Jai Kannada
Blog single photo
January 10, 2018

ಬಜರಂಗದಳ, ಆರ್‌ಎಸ್ಸೆಸ್‌ನವರೂ ಉಗ್ರಗಾಮಿಗಳು: ಸಿದ್ದರಾಮಯ್ಯ 

ಮೈಸೂರು: ಚಾಮರಾಜನಗರದ ನಾಗವಳ್ಳಿಯ ಹೆಲಿಪ್ಯಾಡ್‌ನಲ್ಲಿ  ಸಿಎಂ ಸಿದ್ದರಾಮಯ್ಯ ಬಿಜೆಪಿ, ಭಜರಂಗದಳ, ಆರ್‌ಎಸ್‌ಎಸ್‌ನವರೂ ಉಗ್ರಗಾಮಿಗಳು ಎಂದು ನೇರ ಆರೋಪ ಮಾಡಿದ್ದಾರೆ. ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದೂ ಅವರು ಪ್ರತಿಪಾದಿಸಿದರು.

ರುದ್ರೇಶ್ ಹತ್ಯೆಗೆ ಸಂಬಂಧಿಸಿದಂತೆ ಎನ್‌ಐಎ, ಪಿಎಫ್‌ಐ ಸಂಘಟನೆಯ ಕೆಲವು ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿತ್ತು. ಈ ಕಾರಣಕ್ಕಾಗಿ ಪಿಎಫ್‌ಐ ಸಂಘಟನೆಯನ್ನು ರಾಜ್ಯದಲ್ಲಿ   ಬ್ಯಾನ್ ಮಾಡುತ್ತೀರಾ ಎಂದು ಮಾಧ್ಯಮದವರು ಸಿಎಂರನ್ನು ಪ್ರಶ್ನಿಸಿದಾಗ ಪಿಎಫ್‌ಐ ಜತೆ ಆರ್‌ಎಸ್‌ಎಸ್, ಬಜರಂಗದವರನ್ನೂ ಬ್ಯಾನ್ ಮಾಡಬೇಕು. ಇವರೂ ಕೂಡ ಉಗ್ರಗಾಮಿಗಳೇ ಎಂದು ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. 

ಈ ಕುರಿತು ಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಅವರು ಪ್ರತಿಕ್ರಿಯಿಸಿ, 19 ರಾಜ್ಯಗಳ ಜನರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಆಯ್ಕೆ ಮಾಡಿರಬೇಕಾದರೆ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿರಬೇಕಾದಗೆ, ಬಿಜೆಪಿಯನ್ನು ಉಗ್ರಗಾಮಿ ಎಂದು ಹೇಗೆ ಕರೆಯುತ್ತಾರೆ ಎಂದು ಪ್ರಶ್ನಿಸಿದರು.

Recent Comments

Leave Comments

footer
Top