• 21 January 2018 04:32
Jai Kannada
Jai Kannada
Blog single photo
January 10, 2018

ಪುತ್ರನ ಕೊಲೆ ಶಂಕೆ: ಹೂತಿಟ್ಟ ಶವ ಹೊರತೆಗೆದು ಪರೀಕ್ಷೆ 

ಯಾದಗಿರಿ: ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೋಷಕರು ಶವಸಂಸ್ಕಾರ ಮಾಡಿದ್ದರು. ಆದರೆ ಮೃತ ದೇವಪ್ಪನ ಮೊಬೈಲ್ ಮೆಸೇಜ್‌ಗಳನ್ನು ಪರಿಶೀಲಿಸಿದ ತಂದೆ, ತಾಯಿಗಳಿಗೆ ತಮ್ಮ ಮಗನನ್ನು ಹತ್ಯೆ ನಡೆಸಲಾಗಿದೆ.

ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬ ಬಲವಾದ ಶಂಕೆ ಆವರಿಸಿದೆ. ಈ ಕಾರಣದಿಂದ ವಡಗೇರಾ ಗ್ರಾಮದಲ್ಲಿ ಹೂತಿಟ್ಟ ದೇವಪ್ಪನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ವಡಗೇರಾ ನಿವಾಸಿ ದೇವಪ್ಪ ಮೃತ ವ್ಯಕ್ತಿ. ದೇವಪ್ಪ ಹಾಗೂ ಇದೇ ಗ್ರಾಮದ ನಿವಾಸಿ ಬಸಮ್ಮ ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಪ್ರೇಯಸಿ ಪೋಷಕರು ಮದುವೆ ನಿರಾಕರಿಸಿದ್ದಕ್ಕೆ ಡಿಸೆಂಬರ್ 10 ರಂದು ದೇವಪ್ಪ ಗ್ರಾಮದ ಹೊರಭಾಗದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದೆಣಿಸಿ ದೇವಪ್ಪನ ಪೋಷಕರು ಮೃತನ ಅಂತ್ಯಸಂಸ್ಕಾರ ಮಾಡಿದ್ದರು.

ದೇವಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಭಾವಿಸಿದ ಪೋಷಕರಿಗೆ ದೇವಪ್ಪ ಕೊಲೆಯಾಗಿದ್ದಾನೆ ಎನ್ನುವುದಕ್ಕೆ ಕೆಲವು ಸಾಕ್ಷಿಗಳು ಸಿಕ್ಕಿವೆ.

 ದೇವಪ್ಪನ ಪ್ರೇಯಸಿ ಬಸಮ್ಮನ ಮನೆಯವರೇ ಅವನನ್ನು ಕೊಲೆ ಮಾಡಿದ್ದಾನೆಂಬ ಸಂಶಯ ದೇವಪ್ಪನ ಪೋಷಕರಲ್ಲಿ ಆವರಿಸಿದೆ. ಕೊಲೆ ದೂರಿನ ಹಿನ್ನೆಲೆಯಲ್ಲಿ ವಡಗೇರಾ ಪೊಲೀಸರು ಹಾಗೂ ವೈದ್ಯರ ಸಮ್ಮುಖದಲ್ಲಿ ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Recent Comments

Leave Comments

footer
Top