• 21 October 2018 22:45
Jai Kannada
Jai Kannada
Blog single photo
January 07, 2018

ಅಮೆರಿಕದ ಛೀಮಾರಿ:  ಪಾಕಿಸ್ತಾನ ತೇಪೆ ಹಚ್ಚುವ ಕೆಲಸ 

ಇಸ್ಲಾಮಾಬಾದ್: ಭಯೋತ್ಪಾದನೆ ನಿಲ್ಲಿಸಲು ಯಾವುದೇ ಯತ್ನ ಮಾಡದಿದ್ದರಿಂದ ಅಮೆರಿಕ ಪಾಕಿಸ್ತಾನಕ್ಕೆ ಛೀಮಾರಿ ಹಾಕಿ ಆರ್ಥಿಕ ನೆರವು ಸ್ಥಗಿತಗೊಳಿಸಿದ ಮೇಲೆ ಪಾಕಿಸ್ತಾನ  ತೇಪೆ ಹಚ್ಚುವ  ಕೆಲಸ ಮಾಡುತ್ತಿದೆ.

ಉಗ್ರ ಸಂಘಟನೆಗ ಳಿಗೆ ಆರ್ಥಿಕ ನೆರವು ನೀಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಪಾಕಿಸ್ತಾನ ಎಚ್ಚರಿಸಿದೆ. ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಅಮೆರಿಕ ಎಚ್ಚರಿಕೆ ನೀಡಿದ ಮೇಲೆ ಪಾಕ್ ಕಣ್ಣೊರೆಸುವ ತಂತ್ರವನ್ನು ಹೂಡಿ ಹಫೀಜ್ ಸಯೀದ್, ಅಜರ್ ಮಸೂದ್ ಸಂಘಟನೆಗಳು ಸೇರಿದಂತೆ 72 ಉಗ್ರಸಂಘಟನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

ಆದರೆ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದ್ ಮಾತ್ರ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ. ಆದರೆ ಪಾಕಿಸ್ತಾನ ಮಾತ್ರ ಉಗ್ರಸಂಘಟನೆಗಳಿಗೆ ಆಶ್ರಯ ನೀಡುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಹೇಳುತ್ತಿದೆ.

Recent Comments

Leave Comments

footer
Top