• 19 November 2018 06:21
Jai Kannada
Jai Kannada
Blog single photo
January 07, 2018

ದಟ್ಟ ಮಂಜಿಗೆ ನಾಲ್ವರು ವೇಟ್‌ಲಿಫ್ಟರ್‌ಗಳ ದಾರುಣ ಸಾವು

ನವದೆಹಲಿ:  ದೆಹಲಿಯ ಸಿಂಗೂರ್ ಗಡಿಯಲ್ಲಿ ಭಾನುವಾರ ಮುಂಜಾನೆ ದಟ್ಟವಾದ ಮಂಜು ಕವಿದಿದ್ದರಿಂದ ದಾರಿ ಕಾಣದೇ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ಕು ಮಂದಿ ವೇಟ್‌ಲಿಫ್ಟರ್‌ಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್ ಸೇರಿದಂತೆ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. 
ಅಥ್ಲೀಟ್‌ಗಳು ಪಾಣಿಪತ್‌ನಲ್ಲಿ ನಡೆದ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಿ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ದಟ್ಟ ಮಂಜಿನಿಂದ ಚಾಲಕ  ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಕಂಬಕ್ಕೆ ಡಿಕ್ಕಿಹೊಡೆದಿದ್ದರಿಂದ ಕಾರು ಹಲವು ಬಾರಿ ಪಲ್ಟಿ ಹೊಡೆಜು ನಿಂತಿತ್ತು.

ಮೃತರನ್ನು ಹರೀಶ್, ಟಿಂಕು ಮತ್ತು ಸೂರಜ್ ಎಂದು ಗುರುತಿಸಲಾಗಿದೆ. ನಾಲ್ಕನೇ ವ್ಯಕ್ತಿಯನ್ನು ಗುರುತಿಸಲಾಗಿಲ್ಲ. ಯಾದವ್ ಸಹಚರ ಬಾಲಿ ತಲೆಗೆ ತೀವ್ರ ಪೆಟ್ಟಾಗಿದೆ.

Recent Comments

Leave Comments

footer
Top