• 17 January 2019 21:04
Jai Kannada
Jai Kannada
Blog single photo
January 01, 2018

ಭಾರತದಲ್ಲಿ ಲಂಚಾವತಾರಕ್ಕೆ ಹೆದರುವ ವಿದೇಶಿ ಹೂಡಿಕೆದಾರರು 

 ನವದೆಹಲಿ:  ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಿಕೆ ನಿರ್ಧಾರಕ್ಕೆ ಹಿಂದೇಟು ಹಾಕುತ್ತಿರುವುದಕ್ಕೆ ಮುಖ್ಯ ಕಾರಣ ಭಾರತದಲ್ಲಿನ ಭ್ರಷ್ಟಾಚಾರ. ಇದರ ಜತೆಗೆ ಹೂಡಿಕೆದಾರರ ಆಸ್ತಿಗೆ ಭದ್ರತೆಯ ಅಪಾಯ ಎದುರಿಸುವುದು ಇನ್ನೊಂದು ಕಾರಣ ಎಂದು ಅಮೆರಿಕ ಅಪಾಯ ನಿರ್ವಹಣೆ ಸಂಸ್ಥೆ ಕ್ರಾಲ್ ತಿಳಿಸಿದೆ.

2014ರಲ್ಲಿ ಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾಗತಿಕ ಹೂಡಿಕೆದಾರರು ಭಾರತದಲ್ಲಿನ ಉದ್ದಿಮೆಗಳ ನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆಂದು ನಿರೀಕ್ಷಿಸಿದ್ದರು. ಆದರೆ ಅವರು ನಿರೀಕ್ಷಿಸಿದಂತೆ ಯಾವ ಬದಲಾವಣೆಯೂ ಆಗಿಲ್ಲ ಎಂದು ನ್ಯೂಯಾರ್ಕ್ ಮೂಲದ ರಿಸ್ಕ್ ಕನ್ಸಲ್ಟೆನ್ಸಿ ತಿಳಿಸಿದೆ.
ವಿದೇಶಿ ಹೂಡಿಕೆದಾರರು ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರುವ ಅಂಶಗಳು-ತೆರಿಗೆ, ಅಧಿಕ ನಿರುದ್ಯೋಗದಿಂದ ಸಾಮಾಜಿಕ ಅಶಾಂತಿ, ರಾಜ್ಯ ಮಟ್ಟದ ರಾಜಕೀಯ ಮತ್ತು ಕಡಿಮೆ ಬಂಡವಾಳದ ಬ್ಯಾಂಕಿಂಗ್ ವ್ಯವಸ್ಥೆ.

ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಈ ರಿಸ್ಕ್‌ಗಳು ಕಡಿಮೆಯಾಗಿವೆಯೇ ಎಂಬ ಪ್ರಶ್ನೆಗೆ ಕ್ರಾಲ್ ವ್ಯವಸ್ಥಾಪಕ ನಿರ್ದೇಶಕ ತರುಣ್ ಭಾಟಿಯಾ ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು ಎಂದು ಉತ್ತರಿಸಿದರು.


ಭ್ರಷ್ಟಾಚಾರ ನಿಗ್ರಹ ಕುರಿತಂತೆ ವಿಶ್ವಬ್ಯಾಂಕ್ ವರದಿಯಲ್ಲಿ, ಕೆಲವು ದೊಡ್ಡ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಸಂಕಷ್ಟಕ್ಕೆ ಈಡಾದವು. ಏಕೆಂದರೆ ಅನರ್ಹ ಫಲಾನುಭವಿಗಳು ಹಣ ಪಡೆಯುತ್ತಿರುವುದು ಮತ್ತು ಬಡವರಿಗೆ ನೀಡುವ ಅನುದಾನವನ್ನು ವಿಳಂಬ ಮಾಡುತ್ತಿರುವುದು ಕಾರಣ ಎಂದು ತಿಳಿಸಿದೆ.

 ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್ ಸಮೀಕ್ಷೆ ಪ್ರಕಾರ, ಏಷ್ಯಾ ಪೆಸಿಫಿಕ್‌ನ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅಧಿಕ ಭ್ರಷ್ಟಾಚಾರವಿದೆ. ಮೂರನೇ ಎರಡರಷ್ಟು ಭಾರತೀಯರು ಸರ್ಕಾರಿ ಸೇವೆಗಳಿಗೆ ನಾನಾ ರೀತಿಯಲ್ಲಿ ಲಂಚ ನೀಡಬೇಕಾದ ಪರಿಸ್ಥಿತಿಯಿದೆ ಎಂದು ತಿಳಿಸಿದೆ.
ಸಮೀಕ್ಷೆಯಲ್ಲಿ ಶೇ. 69ರಷ್ಟು ಜನರು ತಾವು ಲಂಚ ನೀಡಿರುವುದಾಗಿ ತಿಳಿಸಿದ್ದಾರೆ. ವಿಯಟ್ನಾಂನಲ್ಲಿ ಶೇ. 65, ಚೀನಾದಲ್ಲಿ ಶೇ. 26 ಮತ್ತು ಪಾಕಿಸ್ತಾನದಲ್ಲಿ ಶೇ. 40ರಷ್ಟಿದೆ.
 

Recent Comments

Leave Comments

footer
Top