Jai Kannada
Jai Kannada
Blog single photo
January 01, 2018

ರಣಜಿ ಟ್ರೋಫಿ ಫೈನಲ್ಸ್‌ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ವಿದರ್ಭ 

ಇಂದೋರ್:  ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ದೆಹಲಿ ಮತ್ತು ವಿದರ್ಭ ನಡುವೆ ನಡೆದ ರಣಜಿ ಟ್ರೋಫಿ ಫೈನಲ್ಸ್‌ನಲ್ಲಿ ವಿಧರ್ಭ ಮೊಟ್ಟಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದುಕೊಳ್ಳುವ  ಮೂಲಕ ಇತಿಹಾಸ ನಿರ್ಮಾಣ ಮಾಡಿದೆ.

ವಿದರ್ಭ ಕಡೆ ರಜನೀಶ್ ಗುರ್ಬಾನಿ ಅವರ 59ಕ್ಕೆ 6 ವಿಕೆಟ್ ಜತೆಗೆ ಹ್ಯಾಟ್ರಿಕ್ ಸೇರಿದಂತೆ ಅಕ್ಷಯ್ ವಾಡ್ಕರ್ ಅವರ ಶತಕವು ವಿದರ್ಭ ಜಯಕ್ಕೆ ನಾಂದಿ ಹಾಡಿತು.

ದೆಹಲಿ ಕಡೆ ದ್ರುವ ಶೋರೆ ಶತಕದೊಂದಿಗೆ ಸ್ಟಾರ್ ಆಟಗಾರರೆನಿಸಿದರು. ಅಂತಿಮ ಸ್ಕೋರು ಡೆಲ್ಲಿ 295 ಮತ್ತು 280. ವಿದರ್ಭ 547 ಮತ್ತು 32/ 1ರಲ್ಲಿ 9 ವಿಕೆಟ್‌ಗಳಿಂದ ಜಯಗಳಿಸಿತು.

Recent Comments

Leave Comments

footer
Top